ಐಸಿಎಆರ್- ಡಿಸಿಆರ್‌ನಿಂದ ಮಾವಿಲನ್ ಬುಡಕಟ್ಟು ರೈತರಿಗೆ ಗೇರು ಗಿಡಗಳ ವಿತರಣೆ, ಗೇರು ಕೃಷಿ ತರಬೇತಿ

0

ಪುತ್ತೂರು: ಮೊಟ್ಟೆತ್ತಡ್ಕದಲ್ಲಿರುವ ಐಸಿಎಆರ್- ಗೇರು ಸಂಶೋಧನಾ ನಿರ್ದೇಶನಾಲಯದ ಬುಡಕಟ್ಟು ಉಪ-ಯೋಜನೆ (ಟಿಎಸ್‌ಪಿ) ಅಡಿಯಲ್ಲಿ ಕೇರಳದ ಕಾಸರಗೋಡಿನ ತಾಯನ್ನೂರುನಲ್ಲಿ ಮಾವಿಲನ್ ಬುಡಕಟ್ಟು ಸಮುದಾಯಕ್ಕೆ ಸೇರಿದ ರೈತರಿಗೆ ವೈಜ್ಞಾನಿಕ ಗೇರು ಕೃಷಿಯ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾಸರಗೋಡಿನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (CRD) ಮತ್ತು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ABARD) ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಸರಗೋಡಿನ CRD ನಿರ್ದೇಶಕ ಡಾ. ಶಶಿಕುಮಾರ್ ತರಬೇತಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಕಾಸರಗೋಡಿನ ABARD ಡಿಡಿಎಂ ಶರೋನ್ ವಾಸ್ ಕಾರ್ಯಕ್ರಮದ ಕುರಿತು ಮಾತನಾಡಿದರು. ಡಾ. ಅಶ್ವತಿ ಚಂದ್ರಕುಮಾರ್ ವಿಜ್ಞಾನಿ (ಕೃಷಿ ವಿಸ್ತರಣೆ) ಟಿಎಸ್‌ಪಿ ಯೋಜನೆಯ ಬಗ್ಗೆ ವಿವರಿಸಿ ಬುಡಕಟ್ಟು ರೈತರು ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಲು ತಿಳಿಸಿದರು. ಹೆಚ್ಚಿನ ಇಳುವರಿ ನೀಡುವ ಗೇರು ತಳಿಗಳನ್ನು ಒಳಗೊಂಡ ೭ ಎಕರೆ ಪ್ರಾತ್ಯಕ್ಷಿಕೆ ತಾಖುಗಳನ್ನು ಈ ಉಪಯೋಜನೆ ಅಡಿಯಲ್ಲಿ ಯೋಜಿಸಲಾಗಿದೆ ಎಂದು ಹೇಳಿದರು.


ಪುತ್ತೂರಿನ ಐಸಿಎಆರ್- ಗೇರು ಸಂಶೋಧನಾ ಸಂಸ್ಥೆಯ ತೋಟಗಾರಿಕೆ ವಿಜ್ಞಾನಿ ಡಾ. ಭಾಗ್ಯ ಎಚ್.ಪಿ, ಉತ್ತಮ ಗೇರು ಕಸಿ ಗಿಡಗಳ ಆಯ್ಕೆ, ಗೇರು ನಾಟಿ ಮಾಡುವಿಕೆ ಮತ್ತು ನಂತರದ ಆರೈಕೆ ಕ್ರಮಗಳ ಕುರಿತು ತಾಂತ್ರಿಕ ಅಧಿವೇಶನ ನಡೆಸಿದರು. ಗೋತ್ರಬಂಧು ವಿಕಾಸನ ಸಮಿತಿ, ಕಾಸರಗೋಡು ಇದರ ಕಾರ್ಯದರ್ಶಿ ಪದ್ಮನಾಭನ್ ಎನ್. ಸ್ವಾಗತಿಸಿದರು. ಸಂವಾದವು ರೈತರು ತಮ್ಮ ಗೇರು ಕೃಷಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನೂಕೂಲವಾಯಿತು. ಮಾವಿಲನ್ ಬುಡಕಟ್ಟು ಸಮುದಾಯದ ಒಟ್ಟು 44 ರೈತರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನೇತ್ರ ಗಂಗಾ, ನೇತ್ರ ಜಂಬೋ-1, ನೇತ್ರ ಜಂಬೋ-2, ಭಾಸ್ಕರ, ಪ್ರಿಯಾಂಕ, ವೆಂಗುರ್ಲಾ-7 ಮತ್ತು ಉಳ್ಳಾಲ-3 ನಂತಹ ಸುಧಾರಿತ ತಳಿಗಳ 1000 ಗೇರು ಕಸಿ ಗಿಡಗಳನ್ನು 32 ಬುಡಕಟ್ಟು ಕುಟುಂಬಗಳಿಗೆ ವಿತರಿಸಲಾಯಿತು. ಗೇರು ಬೆಳೆಯಲ್ಲಿ ಹೆಚ್ಚಿನ ಇಳುವರಿ ನೀಡಲು ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಲಾದ ಪೋಷಕಾಂಶದ ಮಿಶ್ರಣವಾದ ನೇತ್ರಾ ಗೇರು ಸ್ಪೆಷಲ್ (Nethra cashew special) ವಿತರಿಸಲಾಯಿತು.

LEAVE A REPLY

Please enter your comment!
Please enter your name here