ಈಶ್ವರಮಂಗಲ ಸಂಯುಕ್ತ ಮಿಲಾದ್ ಕಮಿಟಿಗೆ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಈಶ್ವರಮಂಗಲದಲ್ಲಿ ನಡೆಯಲಿರುವ ಬೃಹತ್ ಈದ್ ಮಿಲಾದ್ ಕಾರ್ಯಕ್ರಮ ಪ್ರಯುಕ್ತ ಈಶ್ವರಮಂಗಲ ಹಾಗೂ ಪಾಲ್ಯತ್ತಡ್ಕದವರು ಸೇರಿಸಿಕೊಂಡು ಸಂಯುಕ್ತ ಮಿಲಾದ್ ಕಮಿಟಿಯನ್ನು ರಚಿಸಲಾಯಿತು.

ಸಮಿತಿಯ ಗೌರವಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಹಾಗೂ ಅಬ್ದುಲ್ ಲತೀಫ್ ಕೆ.ಎ, ಅಧ್ಯಕ್ಷರಾಗಿ ತ್ವಾಹಾ ಮೇನಾಲ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಇಬ್ರಾಹಿಂ ಬಿ.ಸಿ ಹಾಗೂ ಅಬ್ದುಲ್ಲಾ ಮೆನಸಿನಕಾನ, ಪ್ರಧಾನ ಕಾರ್ಯದರ್ಶಿಯಾಗಿ ವಾಕಿದ್ ಸುಲ್ತಾನ್ ನಗರ, ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಡಿಫ್ಯಾಕ್ಟೋ, ಖಜಾಂಜಿಯಾಗಿ ಸಲಾಂ ಪದಡ್ಕ ಆಯ್ಕೆಯಾಗಿದ್ದಾರೆ. ಮೀಲಾದ್ ಪ್ರಯುಕ್ತ ರಾತ್ರಿ ದಫ್ ಪ್ರದರ್ಶನ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗುತ್ತದೆ. ಈಶ್ವರಮಂಗಲ ಪೇಟೆಯನ್ನು ಸುಂದರವಾಗಿ ಅಲಂಕರಿಸುವುದು, ಮೌಲೂದ್, ಮದಹ್, ಧಾರ್ಮಿಕ ಭಾಷಣ, ಮದರಸಾ ವಿದ್ಯಾರ್ಥಿಗಳ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

LEAVE A REPLY

Please enter your comment!
Please enter your name here