







2.19ಲಕ್ಷ ಲಾಭ, ಶೇ,10 ಡಿವಿಡೆಂಡ್, 80ಪೈಸೆ ಬೋನಸ್


ಪುತ್ತೂರು: ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 2,19,329.22 ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಲೀಟರ್ 80ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎ.ಎಂ ಪ್ರವೀಣಚಂದ್ರ ಆಳ್ವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.




ಸಭೆಯು ಆ.19ರಂದು ಸಂಘದ ಆವರಣದಲ್ಲಿ ನಡೆಯಿತು. ವರದಿ ವರ್ಷದಲ್ಲಿ ಸಂಘವು 83 ಸದಸ್ಯರಿಂದ ರೂ.16,600 ಪಾಲು ಬಂಡವಾಳ ಹೊಂದಿದೆ. ವಾರ್ಷಿಕವಾಗಿ 1,31,407ಲೀಟರ್ ಹಾಲು ಖರೀದಿಸಿ, 1,25,691 ಲೀಟರ್ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಿದೆ. 9,378 ಲೀಟರ್ ಹಾಲು ಸ್ಥಳಿಯವಾಗಿ ಮಾರಾಟ ಮಾಡಿದೆ. ಹಾಲು ವ್ಯವಹಾರ, ಪಶು ಆಹಾರ ವ್ಯಾಪಾರ ಹಾಗೂ ಇತರ ವ್ಯವಹಾರದಿಂದ ಒಟ್ಟು 5,32,501.45 ಆದಾಯ ಗಳಿಸಿದೆ. ಸಂಘದ ಸಂಪೂರ್ಣ ವೆಚ್ಚ ಕಳೆದ ರೂ.2,19,329.22 ನಿವ್ವಳ ಲಾಭಗಳಿಸಿದೆ. ಲಾಭಾಂಶವನ್ನು ನಿಬಂಧನೆಯAತೆ ವಿಂಗಡಿಸಲಾಗಿದೆ ಎಂದು ಹೇಳಿದರು.

ಜಂತು ಹುಳದ ಔಷಧಿ ವಿತರಣೆಗೆ ಚಾಲನೆ ನೀಡಿದ ದ.ಕ ಹಾಲು ಒಕ್ಕೂಟದ ನಿರ್ದೇಶಕ ಎಸ್.ಬಿ ಜಯರಾಮ ರೈ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಹಾಲಿನ ಉತ್ಪಾದನಾ ವೆಚ್ಚಕ್ಕೆ ಹೋಳಿಕೆ ಮಾಡಿದರೆ ದರ ಕಡಿಮೆಯಾಗಿದೆ. ಆದರೆ ದರ ಏರಿಕೆ ಮಾಡಲು ಸರಕಾರ ಅನುಮತಿ ಅವಶ್ಯಕ. ದರ ಏರಿಕೆಗೆ ಒಕ್ಕೂಟದಿಂದ ಮೂರು ಬಾರಿ ಮನವಿ ಮಾಡಲಾಗಿದೆ. ರೈತರಿಗೆ ಒಕ್ಕೂಡದಿಂದ ಪ್ರೋತ್ಸಾಹಧನ ನೀಡುವ ಚಿಂತನೆಯಿದೆ. ಅಲ್ಲದೆ ಹಾಲಿನ ದರ ಏರಿಕೆಯ ಬಗ್ಗೆ ಎಲ್ಲಾ ಸಂಘದ ಸಹಕಾರ ಅಗತ್ಯ. ಎಲ್ಲಾ ಸಂಘದವರು ಒಕ್ಕೂಟದಲ್ಲಿ ಆಗ್ರಹ ಮಾಡಬೇಕು ಎಂದು ಹೇಳಿದ ಅವರು ಶಾಸಕ ಅಶೋಕ್ ಕುಮಾರ್ ರೈಯವರು ಪುತ್ತೂರಿನಲ್ಲಿ ಒಕ್ಕೂಟಕ್ಕೆ 10 ಎಕರೆ ಜಾಗ ಮಂಜೂರುಗೊಳಿಸಿದ್ದು ಅದರಲ್ಲಿ ಘಟಕ ಸ್ಥಾಪನೆ ಮಾಡುವ ಯೋಜನೆಯಿದ್ದು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಒಕ್ಕೂಟದ ವಿಸ್ತರಣಾಧಿಕಾರಿ ವಿದ್ಯಾ ಮಾತನಾಡಿ, ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘವು ಗುಣಮಟ್ಟದ ಹಾಲಿಗೆ ಆದ್ಯತೆ ನೀಡುತ್ತಿದೆ. ಹಾಲಿನಲ್ಲಿ ಅತೀ 8.6 ಎಸ್.ಎನ್.ಎಫ್ ಬರುತ್ತಿದ್ದು ಸಂಘವು ಎಸ್ಎನ್ಎಫ್ಗೆ ಹೆಸರು ಪಡೆದಿದೆ ಎಂದರು. ಸದಸ್ಯರು ವಾರ್ಷಿಕ ಸಮಾನ್ಯ ಸಭೆಯಲ್ಲಿ ಭಾಗವಹಿಸಿ ಒಕ್ಕೂಟದ ಹಾಗೂ ಸರಕಾರದ ಸೌಲಭ್ಯ ಗಳ ಮಾಹಿತಿ ಪಡೆದುಕೊಂಡು ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಜಂತು ಹುಳದ ಔಷಧಿ ವಿತರಣೆ:
ಸಭೆಯ ಪ್ರಾರಂಭದಲ್ಲಿ ಸಂಘದ ನಿರ್ದೇಶಕ ಅಬ್ರೋಸ್ ಡಿ’ಸೋಜ ಅವರ ಅಗರ್ತಬೈಲು ನಿವಾಸದಲ್ಲಿ ಹಸುಗಳಿಗೆ ಜಂತು ಹುಳದ ಔಷಧಿ ವಿತರಣೆಗೆ ದ.ಕ ಹಾಲು ಒಕ್ಕೂಟದ ನಿರ್ದೇಶಕ ಎಸ್.ಬಿ ಜಯರಾಮ ರೈ ನೀಡಿದರು. ಒಕ್ಕೂಟದ ಪಶು ವೈದ್ಯಾಧಿಕಾರಿ ಡಾ.ಅನುದೀಪ್ ಜಂತು ಹುಳದ ನಿರ್ವಹಣೆ ಹಾಗೂ ಹಸುಗಳ ಆರೋಗ್ಯ ರಕ್ಷಣೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಸನ್ಮಾನ
ಸಂಘದ ನಿವೃತ್ತ ಕಾರ್ಯದರ್ಶಿ ಜನಾರ್ದನ ಪೂಜಾರಿ ಕಾಡ್ಲ, ದ.ಕ ಹಾಲು ಒಕ್ಕೂಟದ ನಿರ್ದೇಶಕ ಎಸ್.ಬಿ ಜಯರಾಮ ರೈ ಅವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಜನಾರ್ದನ ಪೂಜಾರಿ ಮಾತನಾಡಿ, ತನ್ನ ಸೇವಾವಧಿಯ ಅನುಭವಗಳನ್ನು ಹಂಚಿಕೊAಡರು.
ಬಹುಮಾನ, ವಿದ್ಯಾರ್ಥಿ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಅಂಬ್ರೋಸ್ ಡಿ ಸೋಜ ಅಗರ್ತಬೈಲು(ಪ್ರ), ಜತ್ತಪ್ಪ ಪೂಜಾರಿ ಕಾಡ್ಲ(ದ್ವಿ) ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.ಸಂಘದ ಸದಸ್ಯರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು 2024-25ನೇ ಶೈಕ್ಷಣಿಕ ಸಾಲಿನ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಗ್ರೀಷ್ಮಾ ಅವರಿಗೆ ನೀಡಿ ಅಭಿನಂದಿಸಿದಲಾಯಿತು.
ಉಪಾಧ್ಯಕ್ಷ ಎನ್.ಅಂಬ್ರೋಸ್ ಡಿ’ಸೋಜ, ನಿರ್ದೇಶಕರಾದ ವಿಜಯ ಕುಮಾರ್ ರೈ ಜಿ., ಎ. ರಾಜೇಶ್ ನಾಯ್ಕ, ದೇವದಾಸ ಎನ್.ರೈ, ಟಿ.ಸತೀಶ್ ಶೆಟ್ಟಿ, ವಾರಿಜ ರೈ ಎ., ಕೆ,ಅಮಿತ್ ರೈ ಹಾಗೂ ಲಕ್ಷ್ಮೀ ರೈ ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಎ.ಎಂ ಪ್ರವೀಣಚಂದ್ರ ಆಳ್ವ ಸ್ವಾಗತಿಸಿದರು. ಕಾರ್ಯದರ್ಶಿ ಮನೋಜ್ ಕುಮಾರ್ ಕೆ. ವರದಿ ಹಾಗೂ ಆಯ-ವ್ಯಯಗಳನ್ನು ಮಂಡಿಸಿದರು. ನಿರ್ದೇಶಕ ಅಂಬ್ರೋಸ್ ಡಿ’ಸೋಜಾ ಅಗರ್ತಬೈಲು ವಂದಿಸಿದರು. ಕೆ. ಚಂದಪ್ಪ ಪೂಜಾರಿ ಕಾಡ್ಲ ಕಾರ್ಯಕ್ರಮ ನಿರೂಪಿಸಿ, ಹಾಲು ಪರೀಕ್ಷಕಿ ರಮ್ಯ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭೋಜನ ನೆರವೇರಿತು.
ದರ ಪರಿಷ್ಕರಣೆ ಮಾಡಬೇಕು
ದ.ಕ ಜಿಲ್ಲೆಯಲ್ಲಿ ಹಾಲಿನ ಉತ್ಪಾದನಾ ವೆಚ್ಚವೇ ಅಧಿಕವಾಗಿದೆ. ದರ ಏರಿಕೆ ಮಾಡುವಂತೆ ಪ್ರತಿ ವರ್ಷದ ಸಭೆಯಲ್ಲಿ ಆಗ್ರಹಿಸಲಾಗುತ್ತಿದೆ. ಗುಣಮಟ್ಟದ ಹಾಲಿಗೆ ಪ್ರಸ್ತುತ ನೀಡಲಾಗುತ್ತಿರುವ ದರ ತೀರಾ ಕಡಿಮೆಯಾಗಿದೆ. ಹೈನುಗಾರಿಕೆ ಉಳಿಸಿ ಬೆಳೆಸುವ ನಿಟ್ಟಿನದಲ್ಲಿ ದರ ಪರಿಷ್ಕರಣೆಯು ಆವಶ್ಯಕವಾಗಿ ಆಗಬೇಕಿದೆ. ಅಲ್ಲದೆ ಹೈನುಗಾರರಿಗೆ ಸರಕಾರ ನೀಡುತ್ತಿರುವ ಪ್ರೋತ್ಸಾಹ ಧನವನ್ನೂ ಏರಿಕೆ ಮಾಡಬೇಕು ಎಂದು ಸಂಘದ ಸದಸ್ಯರು ಆಗ್ರಹಿಸಿದರು.
ಸಂಘವು ಸದಸ್ಯರ ಸಹಕಾರದಿಂದ ಬೆಳವಣಿಗೆಯಾಗುತ್ತಿದೆ. ಗುಣಮಮಟ್ಟದ ಹಾಲಿಗೆ ಅಧಿಕ ದರವು ದೊರೆಯುತ್ತಿದ್ದು ಸದಸ್ಯರು ಗುಣಮಟ್ಟದ ಹಾಲನ್ನೇ ಸಂಘಕ್ಕೆ ನೀಡಿ ಸಹಕರಿಸಬೇಕು. ಈ ಭಾರಿ ಸಂಘವು ಹೆಚ್ಚು ಲಾಭಗಳಿಸಿದ್ದು ಸದಸ್ಯರಿಗೆ ಬೋನಸ್ ಏರಿಕೆ ಮಾಡಲಾಗಿದೆ. ಹಾಲಿನ ದರ ಏರಿಕೆಯ ಬಗ್ಗೆ ಒಕ್ಕೂಟದ ಮಹಾಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ಸದಸ್ಯರಿಗೆ ಅಧ್ಯಯನ ಪ್ರವಾಸ ಆಯೋಜಿಸುವ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು.
ಎ.ಎಂ ಪ್ರವೀಣ್ ಚಂದ್ರ ಆಳ್ವ, ಅಧ್ಯಕ್ಷರು










