ಸುಳ್ಯ ನಗರದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಯವರಿಗೆ ನಗರ ಕಾಂಗ್ರೆಸ್ ವತಿಯಿಂದ ಮನವಿ- ಡಿ ಸಿ ಭರವಸೆ

0

ಪುತ್ತೂರು: ಸಮಸ್ಯೆಗಳ ಪರಿಶೀಲನೆಗೆ ಸುಳ್ಯಕ್ಕೆ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್. ವಿ. ದರ್ಶನ್ ರವರಿಗೆ ನಗರ ಕಾಂಗ್ರೆಸ್ ಅಧ್ಯಕ್ಷ ಎಂ. ಜೆ. ಶಶಿಧರ್ ರವರ ನೇತೃತ್ವ ದ ನಿಯೋಗ ಭೇಟಿ ಮಾಡಿ ಸುಳ್ಯ ನಗರದ ಪ್ರಮುಖ ಸಮಸ್ಯೆಗಳಾದ ಕಸ ವಿಲೇವಾರಿಯ ಅವ್ಯವಸ್ಥೆ ಯ ಬಗ್ಗೆ ಗಮನ ಸೆಳೆದು ನಗರ ಪಂಚಾಯತ್ ಆವರಣದಲ್ಲಿ ಮತ್ತೆ ಡಂಪಿಂಗ್ ಯಾರ್ಡ್ ಮಾಡಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಅಮೃತ್ 2.0 ಯೋಜನೆಗಾಗಿ ಅಗೆದ ರಸ್ತೆ ಇನ್ನೂ ದುರಸ್ತಿಯಲ್ಲಿದ್ದು ಮುಖ್ಯ ರಸ್ತೆ ಯಲ್ಲಿ ಜನ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ದುರಸ್ಥಿಗೆ ಆದೇಶ ನೀಡಬೇಕು, 8 ವರ್ಷಗಳಿಂದ ನಗರ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಒಂದೇ ಒಂದು ನಿವೇಶನ ನೀಡಿಲ್ಲ, ನಗರ ಆಶ್ರಯ ಸಮಿತಿ ಸಭೆ ಕರೆಯಲು ಮೀನ ಮೇಷ ಎನಿಸುತ್ತಿದ್ದಾರೆ, ನಗರ ವ್ಯಾಪ್ತಿಯಲ್ಲಿ ಮಳೆಗಾಲ ಮುಗಿಯುತ್ತಾ ಬಂದರೂ ದುರಸ್ತಿ ಕಾರ್ಯ ಮಾಡದೆ ನೀರು ರಸ್ತೆಯಲ್ಲೇ ಹರಿದು ಸಣ್ಣ ಮಳೆ ಬಂದರೂ ಜನರ ಜನ ಜೀವನ ಅಸ್ತವ್ಯಸ್ತ ವಾಗುತ್ತಿದೆ ಕೂಡಲೇ ಆದೇಶ ನೀಡಿ ಎಂದರು.

ಈ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಕೆ ಡಿಪಿ ಸದಸ್ಯ ಧರ್ಮಪಾಲ ಕೊಯಿoಗಾಜೆ, ಅಚ್ಚುತ ಮೆಲ್ಕಜೆ, ವಿಜಯ ಕುಮಾರ್ ಆಲೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here