






ಪುತ್ತೂರು: ಕರ್ನಾಟಕ ಸರಕಾರದ ಆದೇಶದಂತೆ ಗೃಹ ಜ್ಯೋತಿ ಫಲಾನುಭವಿಗಳ ಪರಿಶೀಲನೆ ಹಾಗೂ ನೋಂದಣಿ ಪ್ರಕ್ರಿಯೆಯು ಆ.31ರ ಅಂತ್ಯಕ್ಕೆಪೂರ್ಣಗೊಳ್ಳಲಿದ್ದು ವಿದ್ಯುತ್ ಬಳಕೆದಾರರ ಅನುಕೂಲಕ್ಕಾಗಿ ಆಗಸ್ಟ್ ತಿಂಗಳ ಮಾಸಾಂತ್ಯದ ರಜಾ ದಿನಗಳಲ್ಲಿಯೂ ಕಾರ್ಯನಿರ್ವಹಿಸಲಿದೆ.


ಮಾಸಾಂತ್ಯದ ರಜಾ ದಿನಗಳಾದ ಆ.22ರ ತಿಂಗಳ ನಾಲ್ಕನೇ ಶನಿವಾರ ಹಾಗೂ ಆ.23ರ ಆದಿತ್ಯವಾರ ಮೆಸ್ಕಾಂನ ಬನ್ನೂರಿನಲ್ಲಿರುವ ಪುತ್ತೂರು ನಗರ ಹಾಗೂ ಕುಂಬ್ರದಲ್ಲಿರುವ ಗ್ರಾಮಾಂತರ ಉಪವಿಭಾಗ ಕಚೇರಿಗಳಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.













