ಇಂದು(ಆ.21) ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜಿಗೆ 574.79 ಕೋಟಿ ರೂ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ

0

ಪುತ್ತೂರು: ಶಾಸಕ ಅಶೋಕ್ ರೈ ಅವರ ಕನಸಿನ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು 574.79 ಕೋಟಿ ರೂ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆಯಲಿದೆ.


ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಅನುನೋದನೆ ದೊರೆಯುವದರೊಂದಿಗೆ ಮೆಡಿಕಲ್ ಕಾಲೇಜು ನಿರ್ಮಾಣ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳ್ಳಲಿದೆ.
ಆಡಳಿತಾತ್ಮಕ ಅನುಮೋದನೆ ಕೋರಿ ಕಳೆದ ವಾರ ಶಾಸಕ ಅಶೋಕ್ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಇಂದು ಮುಖ್ಯಮಂತ್ರಿಗಳು ಈ ಅನುಮೋದನೆ ನೀಡಲಿದ್ದಾರೆ.


ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿಯೇ ಸಿದ್ದ ಎಂಬ ಶಾಸಕ ಅಶೋಕ್ ರೈ ಅವರ ಚುನಾವಣಾ ಪೂರ್ವ ಭರವಸೆಯಾಗಿತ್ತು. ಈ ಭರವಸೆ ಕಳೆದ ಬಜೆಟ್ ಅಧಿವೇಶನದಲ್ಲಿ ಮೆಡಿಕಲ್ ಕಾಲೇಜು ಘೋಷಣೆಯೊಂದಿಗೆ ಈಡೇರಿತ್ತು ಇದೀಗ ಅನುದಾನವೂ ಬಿಡುಗಡೆಯಾಗುವುದರ ಮೂಲಕ ಜಿಲ್ಲೆಯ ಜನರ ಬಹುವರ್ಷದ ಕನಸು ನನಸಾಗಲಿದೆ.

LEAVE A REPLY

Please enter your comment!
Please enter your name here