ಗೋಳಿತ್ತೊಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

7.06 ಲಕ್ಷ ರೂ.ನಿವ್ವಳ ಲಾಭ | ಶೇ.20 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 87 ಪೈಸೆ ಬೋನಸ್ ಘೋಷಣೆ

ನೆಲ್ಯಾಡಿ: ಗೋಳಿತ್ತೊಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಆ.21ರಂದು ಬೆಳಗ್ಗೆ ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಕಲಾಮಂದಿರದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಕೊರಗಪ್ಪ ಗೌಡ ಕೆ.ಮಾತನಾಡಿ, ನಮ್ಮ ಸಂಘವು 1997ರಲ್ಲಿ ಕಾರ್ಯಾರಂಭ ಮಾಡಿದ್ದು ಪ್ರಸ್ತುತ 269 ಸದಸ್ಯರಿದ್ದು 55,025 ಪಾಲು ಬಂಡವಾಳ ಹೊಂದಿದೆ. ಪ್ರಸ್ತುತ ದಿನವಹಿ 850 ಲೀ.ಹಾಲು ಸಂಗ್ರಹವಾಗುತ್ತಿದೆ. ವರದಿ ಸಾಲಿನಲ್ಲಿ ಹಾಲು ವ್ಯಾಪಾರ, ನಂದಿನಿ ಪಶು ಆಹಾರ, ಲವಣ ಮಿಶ್ರಣ ಮಾರಾಟದಿಂದ ಒಟ್ಟು 7,06,156.41 ರೂ. ನಿವ್ವಳ ಲಾಭ ಬಂದಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.20 ಡಿವಿಡೆಂಡ್ ಹಾಗೂ ಪ್ರತಿ ಲೀ.ಹಾಲಿಗೆ 87 ಪೈಸೆಯಂತೆ ಬೋನಸ್ಸು ನೀಡುವುದಾಗಿ ಘೋಷಿಸಿದರು. ಸಂಘವು ಎ ಗ್ರೇಡ್‌ನಲ್ಲಿದೆ. ಕಳೆದ ವರ್ಷಕ್ಕಿಂತ ವರದಿ ಸಾಲಿನಲ್ಲಿ ಹೆಚ್ಚಿನ ಪ್ರಗತಿ ಕಂಡಿದ್ದು ಲಾಭಾಂಶದಲ್ಲೂ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲೂ ಸಂಘದ ಸದಸ್ಯರು ಉತ್ತಮ ಗುಣಮಟ್ಟದ ಹಾಲು ಸಂಘಕ್ಕೆ ಪೂರೈಸಬೇಕು. ಇದರಿಂದ ಹೆಚ್ಚಿನ ಲಾಭಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ ಕೊರಗಪ್ಪ ಗೌಡ ಅವರು, ಈ ವರ್ಷ ಹೆಚ್ಚಿನ ಲಾಭ ಬಂದಿರುವುದರಿAದ ಸಂಘಕ್ಕೆ ಹಾಲು ಹಾಕಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡುವುದಾಗಿ ಹೇಳಿದರು.


ಅತಿಥಿಯಾಗಿದ್ದ ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ.ಮಾತನಾಡಿ, ಹಾಲು ಉತ್ಪಾದಕರಿಗೆ ಕಳೆದ ಎಪ್ರಿಲ್ ತನಕದ ಪ್ರೋತ್ಸಾಹಧನ ಜಮೆಯಾಗಿದೆ. ಹಾಲು ಉತ್ಪಾದಕರು ನಂದಿನಿ ಪಶುಆಹಾರ, ಲವಣ ಮಿಶ್ರಣವನ್ನು ಸಂಘದಿAದಲೇ ಖರೀದಿಸಬೇಕು. ಇದರಿಂದ ಸಂಘಕ್ಕೆ ಹೆಚ್ಚಿನ ಲಾಭವೂ ಸಿಗಲಿದ್ದು ಸದಸ್ಯರಿಗೆ ಪ್ರಯೋಜನವಾಗಲಿದೆ. ಒಕ್ಕೂಟದಿಂದ ವರ್ಷದಲ್ಲಿ 2 ಸಲ ಜಂತುಹುಳ ನಿವಾರಣೆ ಮಾತ್ರೆ ನೀಡಲಾಗುತ್ತದೆ. ಆರು ತಿಂಗಳಿಗೊಮ್ಮೆ ಹಸುಗಳಿಗೆ ಜಂತುಹುಳದ ಮಾತ್ರೆ ನೀಡಬೇಕು. ಅಲ್ಲದೇ ಒಕ್ಕೂಟದಿಂದ ಮಿನಿಡೈರಿ, ಗೊಬ್ಬರ್ ಗ್ಯಾಸ್, ರಬ್ಬರ್ ಮ್ಯಾಟ್ ಸೇರಿದಂತೆ ವಿವಿಧ ಸವಲತ್ತುಗಳು ದೊರೆಯುತ್ತವೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದ ಅವರು, ಹಾಲು ಕಲಬೆರಕೆ ಮಾಡಿದಲ್ಲಿ 6 ತಿಂಗಳು ಜೈಲು ಶಿಕ್ಷೆಗೆ ಕಾನೂನಿನಲ್ಲಿ ಅವಕಾಶವಿದೆ. ಆದ್ದರಿಂದ ಗುಣಮಟ್ಟ ಹಾಗೂ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಹೇಳಿದರು.


ದ.ಕ.ಹಾಲು ಒಕ್ಕೂಟದ ಪಶುವೈದ್ಯಾಧಿಕಾರಿ ಡಾ.ಜಿತೇಂದ್ರ ಪ್ರಸಾದ್ ಮಾತನಾಡಿ, ಜಾನುವಾರುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು. ವ್ಯಾಕ್ಸಿನ್ ಸಹ ಕೊಡಿಸಬೇಕು ಎಂದ ಅವರು ಗಂಟುರೋಗ, ಕಾಲುಬಾಯಿ ರೋಗದ ಕುರಿತು ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಜನಾರ್ದನ ಪಟೇರಿ, ನಿರ್ದೇಶಕರಾದ ನೋಣಯ್ಯ ಪೂಜಾರಿ ಅಂಬರ್ಜೆ, ಹೇಮಲತಾ ತಿರ್ಲೆ, ಕೆ.ಕುಶಾಲಪ್ಪ ಗೌಡ ಕೊಂಬ್ಯಾನ, ರಮೇಶ ಕೆ.ಬಿ.ಕೊಂಕೋಡಿ, ಶಶಿಧರ ಪಟೇರಿ, ಎ.ಕುಶಾಲಪ್ಪ ಗೌಡ ಅನಿಲ, ವಿಶ್ವನಾಥ ಮೂಲ್ಯ ನೆಕ್ಕರೆ, ಮೀನಾಕ್ಷಿ ಆಲಂತಾಯ, ಹರೀಶ ನಾಯ್ಕ ತಿರ್ಲೆ, ಭಾರತಿ ಎಸ್.ಪುಳಿತ್ತಡಿ, ರಾಜೀವಿ ಬೊಟ್ಟಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಪದ್ಮನಾಭ ಭಟ್ ಕೆ.,ವರದಿ ಮಂಡಿಸಿದರು. ನೋಣಯ್ಯ ಪೂಜಾರಿ ಅಂಬರ್ಜೆ ಸ್ವಾಗತಿಸಿದರು. ಹಾಲು ಪರೀಕ್ಷಕ ಧನಂಜಯ ಎ.ವಂದಿಸಿದರು. ಜಯಂತ ಅಂಬರ್ಜೆ ನಿರೂಪಿಸಿದರು. ಹೇಮಲತಾ ತಿರ್ಲೆ ಪ್ರಾರ್ಥಿಸಿದರು.


ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಬಹುಮಾನ
2025-26ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಾದ ಕುಶಾಲಪ್ಪ ಗೌಡ ಕೆ.ಕೊಂಬ್ಯಾನ (ಪ್ರಥಮ), ನಾರಾಯಣ ಪೂಜಾರಿ ಅಂಬರ್ಜೆ (ದ್ವಿತೀಯ), ನೋಣಯ್ಯ ಪೂಜಾರಿ ಅಂಬರ್ಜೆ(ತೃತೀಯ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯ ದಿನೇಶ್ ಕೋಲ್ಪೆ ಇವರ ಪುತ್ರಿ ಮೇಘನ, ಸದಸ್ಯ ಉಮೇಶ ಅಗರ್ತ ಇವರ ಪುತ್ರಿ ಅದ್ವಿಕಾ ಎ.ಕುಂದರ್, ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯ ಲಿಂಗಪ್ಪ ಗೌಡ ಶಾಂತಿಮಾರು ಅವರ ಪುತ್ರಿ ಡಿ.ಎಲ್.ಮಧುರ, ಸದಸ್ಯೆ ಲೀಲಾವತಿ ಕೊಂಬ್ಯಾನ ಅವರ ಪುತ್ರ ಲಿತೀಶ್‌ಕುಮಾರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

LEAVE A REPLY

Please enter your comment!
Please enter your name here