






ಕಾಣಿಯೂರು: ಸರಕಾರಿ ಪದವಿಪೂರ್ವ ಕಾಲೇಜು ಕಬಕದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಚೆಸ್ ಪಂದ್ಯಾಟದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಾಶ್ರಿತ್ ರೈ ವಿ (8 ನೇ) ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಓಟೋಳಿ ಶರತ್ ಕುಮಾರ್ ರೈ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಳಿಕ್ಕಳದ ಶಿಕ್ಷಕಿ ರೂಪಕುಮಾರಿ ದಂಪತಿಗಳ ಸುಪುತ್ರ.


ಪ್ರೌಢಶಾಲಾ ವಿಭಾಗದಲ್ಲಿ ಸಾನ್ವಿಕ ಎಚ್ (10ನೇ) ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಶೇರ ಯಾದವ ಮತ್ತು ವೀಣಲತಾ ದಂಪತಿಗಳ ಪುತ್ರಿ.ವಿಜೇತರನ್ನು ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾಡಳಿತ ಅಧಿಕಾರಿಗಳು, ಮುಖ್ಯ ಗುರುಗಳು, ಶಿಕ್ಷಕ ವೃಂದದವರು ಅಭಿನಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕೆ ಮತ್ತು ಸುವರ್ಣ ಕೆ ಬಿ ಉತ್ತಮ್ ಮಾರ್ಗದರ್ಶನ ನೀಡಿದರು. ಶಿಕ್ಷಕಿ ಸೌಮ್ಯ ಪಿ ರೈ ಸಹಕರಿಸಿದರು.













