ಆ.23(ನಾಳೆ) :ಪಾಣಾಜೆ ಬೊಳ್ಳಿಂಬಳದಲ್ಲಿ ಹಿಂದವಿ ಕೆಸರ್ದ ಲೇಸ್ ಕಾರ್ಯಕ್ರಮ

0

ನಿಡ್ಪಳ್ಳಿ; ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಪಾಣಾಜೆ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಹಿಂದವಿ ಕೆಸರ್ದ ಲೇಸ್ ಕಾರ್ಯಕ್ರಮ ಆ.23 ರಂದು ಶ್ರೀ ದೇವಿವನ ಗದ್ದೆ ಬೊಳ್ಳಿಂಬಳ-ಪಾಣಾಜೆ ಇಲ್ಲಿ ನಡೆಯಲಿದೆ.

 ಬೆಳಿಗ್ಗೆ ಗಂಟೆ 9 ಕ್ಕೆ ಕಾರ್ಯಕ್ರಮ ಉದ್ಘಾಟನೆ ಗೊಳ್ಳಲಿದ್ದು ಸ್ಪರ್ಧಾ ಕಾರ್ಯಕ್ರಮಗಳು ಬೆಳಿಗ್ಗೆ ಗಂಟೆ 10 ರಿಂದ ಆರಂಭ ಗೊಳ್ಳಲಿದೆ.ಮಧ್ಯಾಹ್ನ 12.30 ಕ್ಕೆ ಮಧ್ಯಾಹ್ನದ ಭೋಜನ, ಸಂಜೆ ಗಂಟೆ 5-00ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

   ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಆಟೋಟ ಸ್ಪರ್ಧೆಗಳು ನಡೆಯಲಿದ್ದು ಹಿಂದು ಭಾಂದವರಿಗೆ ಮಾತ್ರ ಪ್ರವೇಶ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here