






ಪುತ್ತೂರು: ಪ್ರತಿಷ್ಠಿತ ಕೇರ್ ಹೆಲ್ತ್ ಇನ್ಸೂರೆನ್ಸ್ ಕಂಪನಿ ಇವರು ಏರ್ಪಡಿಸಿದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ ವರ್ಷ – 2025 ಸ್ಪರ್ಧೆಯಲ್ಲಿ ಪ್ರೀಮಿಯಂ ಸಂಗ್ರಹಣೆಯ ಗುರಿ ಮೀರಿದ ಅತ್ಯುತ್ತಮ ಸಾಧನೆಗಾಗಿ ಹಾಗೂ ಸೇವೆಗೆ Budapest ( Europe) ನಲ್ಲಿ ನಡೆಯುವAnnual (Sales) Councilನ Directors’ Club Awards Nite ಸಮ್ಮೇಳನದಲ್ಲಿ ನೀಡುವ ಪ್ರತಿಷ್ಠಿತAnnual (Sales) Council-25ನ Director’s Club ಮೆಂಬರ್ ಶಿಪ್ ಮತ್ತು ಪ್ರಶಸ್ತಿಗೆ ಬಾಲಕೃಷ್ಣ ನಾಯಕ್ ಸಿ ಇವರು ಆಯ್ಕೆಯಾಗಿದ್ದಾರೆ.


ಇವರು ಕೇರ್ ಹೆಲ್ತ್ ಇನ್ಶೂರೆನ್ಸ್ ಮಂಗಳೂರು ವಲಯದ, 15 ವರ್ಷದ ಇತಿಹಾಸದಲ್ಲಿ ಪುತ್ತೂರಿನಿಂದ ಆಯ್ಕೆಯಾದ ಪ್ರಥಮ ಹಾಗೂ ಏಕೈಕ ಹೆಲ್ತ್ ಇನ್ಶೂರೆನ್ಸ್ ಅಡ್ವೈಸರ್ ಅಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ 3 ಸಲಹೆಗಾರರಲ್ಲಿ ಓರ್ವರಾಗಿದ್ದಾರೆ. ಇವರು ಹೆಲ್ತ್ ಇನ್ಶೂರೆನ್ಸ್ ವಿಷಯದ ಬಗ್ಗೆ ಹಲವಾರು ವರ್ಷದ ಅನುಭವ, ಜ್ಞಾನ, ಪರಿಣತಿ ಹೊಂದಿರುತ್ತಾರೆ. ತನ್ನ ಈ ಸಾಧನೆ, ಯಶಸ್ಸು ಹಾಗೂ ಪ್ರಶಸ್ತಿಗೆ ತನ್ನ ಎಲ್ಲಾ ಪಾಲಿಸಿದಾರರು ಮತ್ತು ಅವರ ಸಹಕಾರವೇ ಮುಖ್ಯ ಕಾರಣ ಎಂದು ತಿಳಿಸಿದ್ದಾರೆ. ಇವರು ಶ್ರೀರಾಮ್ ಶೇರ್ ಸರ್ವಿಸ್, 1st Floor,, ಮೋಹನ್ ಕೋಲ್ಡ್ ಹೌಸ್,Opp: ಚರ್ಚ್, ಮುಖ್ಯ ರಸ್ತೆ, ಪುತ್ತೂರು, ಇಲ್ಲಿ ಇವರು ಇನ್ಶೂರೆನ್ಸ್ ವ್ಯವಹಾರ ಮಾಡುತ್ತಿದ್ದಾರೆ.



ಸಮ್ಮೇಳನ ದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಲ್ಲಾ ಅಡ್ವೈಸರ್ಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಇದರಲ್ಲಿ ಅಡ್ವೈಸರ್ ಗಳು Zonal Business Head, National Head ಇವರೊಂದಿಗೆ ಬೆರೆತು 1 ದಿನ ಪರಸ್ಪರ ಸಂಪರ್ಕ ದಲ್ಲಿರಲು ಸಾಧ್ಯವಾಗುವ ಒಂದು ಅಪೂರ್ವ ಅವಕಾಶವಾಗಿರುತ್ತದೆ.










