






56.06 ಲಕ್ಷ ರೂ. ನಿವ್ವಳ ಲಾಭ, ಶೇ. 16 ಡಿವಿಡೆಂಡ್ ಘೋಷಣೆ


ಪುತ್ತೂರು: ಇಲ್ಲಿನ ಸಿ.ಪಿ.ಸಿ, ಸಂಕೀರ್ಣದಲ್ಲಿ ಕಾರ್‍ಯನಿರ್ವಹಿಸುತ್ತಿರುವ ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 24 ನೇ ವರ್ಷದ ಮಹಾಸಭೆಯು ಆ. 23 ರಂದು ಸಂಸ್ಥೆಯ ಕಚೇರಿಯಲ್ಲಿ ಜರಗಿತು.



ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಕೆ.ಕಸ್ತೂರಿ ಪ್ರಭುರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯು 2025-26ನೇ ಸಾಲಿನಲ್ಲಿ 11, 04,67,829.20 ರೂ, ಠೇವಣಾತಿ ಹೊಂದಿದ್ದು, 7,38, 78,955.00 ರೂ ಸಾಲ ವಿತರಣೆ ಮಾಡಲಾಗಿದೆ. 56,06,867.53 ರೂ. ನಿವ್ವಳ ಲಾಭ ಬಂದಿರುತ್ತದೆ, ಈ ಬಾರಿ ಸದಸ್ಯರಿಗೆ ಶೇ. 16 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು. ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿಯು 2002 ನವೆಂಬರ್ 25ರಂದು ಉದ್ಘಾಟನೆಗೊಂಡಿದ್ದು, 3340 ಮಂದಿ ಸದಸ್ಯರುಗಳು ಇದ್ದು, 84,23,200.00 ರೂ. ಪಾಲು ಬಂಡವಾಳ ಇದೆ ಎಂದರು.
ಸಹಕಾರಿಯ ನಿಧಿಗಳು: ವರ್ಷದ ಆರಂಭದಲ್ಲಿ ಸಹಕಾರಿಯ ನಿಧಿಗಳು ರೂ-2,28,48,451,87 ಆಗಿದ್ದು, ವರ್ಷಾಂತ್ಯದಲ್ಲಿ ರೂ. 2,68,79,312.60 ಕ್ಕೆ ಏರಿರುತ್ತದೆ, ಇದರಲ್ಲಿ ಸಹಕಾರಿ ಕ್ಷೇಮ ನಿಧಿಯು ರೂ-98,57,568.60 ಮತ್ತು ಇತರ ನಿಧಿಗಳು ರೂ-1,70,21,744.00 ಆಗಿರುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಎನ್. ಸುಭಾಷ್ ನಾಯಕ್ , ನಿರ್ದೇಶಕರಾದ ಎ. ಮನೋಜ್ ಕುಮಾರ್, ದೀಪಾ ಪ್ರಭು, ಯು.ಬಾಲಕೃಷ್ಣ ನಾಯಕ್, ಪಾಂಡುರಂಗ ಹೆಗ್ಡೆ ಪಿ, ರಾಜರಾಮ್ ಪ್ರಭು, ಯಶವಂತ ನಾಯಕ್, ಶಿವಾನಂದ ನಾಯಕ್, ಶಿವರಾಮ ಪ್ರಭು, ವಸಂತ ಬಿ, ಯತೀಂದ್ರನಾಥ್ ಪಿ, ವಿದ್ಯಾ ನಾಯಕ್ ಉಪಸ್ಥಿತರಿದ್ದರು.
ಒಂದು ಕೋಟಿ ರೂಪಾಯಿ ಲಾಭ ಬರಲಿ
ಸದಸ್ಯ ಸುರೇಶ್ ಪ್ರಭು ಶೆಟ್ಟಿಮಜಲುರವರು ಮಾತನಾಡಿ ಸಂಘವು ಈ ಬಾರಿ 56 ಲಕ್ಷ ರೂಪಾಯಿ ಲಾಭ ಬಂದಿರುವುದು ತುಂಬಾ ಖುಷಿಯ ವಿಚಾರವಾಗಿದ್ದು, ಮುಂದಿನ ವರ್ಷ ಸಂಘ 1 ಕೋಟಿ ರೂಪಾಯಿ ಲಾಭ ಬರುವಂತೆ ನಾವೆಲ್ಲ ಸೇರಿ ಪ್ರಯತ್ನ ಮಾಡೋಣ ಎಂದು ಹೇಳಿದರು,ಸದಸ್ಯ ಶ್ರೀನಿವಾಸ್ ಸಾಮಂತ್ ವಿವಿಧ ಸಲಹೆ ಸೂಚನೆಯನ್ನು ನೀಡಿದರು.
ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ವಿಶಾಲಾಕ್ಷಿ ವರದಿ ವಾಚಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ನಳಿನಾಕ್ಷಿ , ದೀಕ್ಷಿತಾ, ಪುಷ್ಪಲತಾ ರವರು ವಿವಿಧ ಕಾರ್‍ಯಕ್ರಮ ನಿರೂಪಿಸಿದರು. ಕಾರುಣ್ಯ ಲಕ್ಷ್ಮಿ ಪ್ರಾರ್ಥನೆಗೈದರು. ಸಂಸ್ಥೆಯ ಪಿಗ್ಮಿ ಸಂಗ್ರಾಹಕ ಸತೀಶ್ ಪ್ರಭು ಮಣಿಯ ಸ್ವಾಗತಿಸಿ, ವಂದಿಸಿದರು. ಪಿಗ್ಮಿಸಂಗ್ರಾಹಕರಾದ ದಿನೇಶ್ ಮತ್ತು ಶ್ರೀಧರ್ ಸಹಕರಿಸಿದರು. ಸಂಘದ ಸದಸ್ಯರುಗಳು ಭಾಗವಹಿಸಿದರು.
ಸಂತಾಪ
ಸಂಘದ ನಿರ್ದೇಶಕರುಗಳಾಗಿದ್ದ ಪುರುಷೋತ್ತಮ ಪ್ರಭು ಎಚ್ ಮತ್ತು ಸುಮಿತ್ರ ಪಿರವರುಗಳು ನಿಧನಕ್ಕೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಸಂತಾಪ ಸೂಚಿಸಲಾಯಿತು.
ಗ್ರಾಹಕರ ನಿರಂತರ ಸಹಕಾರದಿಂದ ಅಭಿವೃದ್ಧಿ
ಪುತ್ತೂರಿನ ಸಿಪಿಸಿ ಸಂಕೀರ್ಣದಲ್ಲಿ ನಿರಂತರವಾಗಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಸಹಕಾರಿಯ ನಿಯಮಗಳಿಗನುಸಾರವಾಗಿ ಸದಸ್ಯರಿಗೆ ಶೀಘ್ರವಾಗಿ ಸಾಲ ನೀಡಲಾಗುವುದು. ಮುಂದಿನ ವರ್ಷ ಸಂಘ 25 ನೇ ವರ್ಷಚರಣೆಯ ಸಂಭ್ರಮದಲ್ಲಿ ಇದೆ.
ಕೆ.ಕಸ್ತೂರಿ ಪ್ರಭು. ಅಧ್ಯಕ್ಷರು, ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಪುತ್ತೂರು










