







ಪುತ್ತೂರು:ಜೇಸಿಐ ಮಡಂತ್ಯಾರಿನ ಆತಿಥ್ಯದಲ್ಲಿ ನಡೆದ ಜೇಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಆಲಂಕಾರು ಘಟಕದ ಪೂರ್ವಾಧ್ಯಕ್ಷ ಜೇಸಿ ಗುರುಕಿರಣ್ ಶೆಟ್ಟಿ ಅವರಿಗೆ ಸಾಧನಾ ಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು.
2016ರಲ್ಲಿ ಜೇಸಿಐ ಆಲಂಕಾರು ಘಟಕಕ್ಕೆ ಸದಸ್ಯರಾಗಿ ಸೇರಿದ ಅವರು 2017ರಲ್ಲಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಕಡಬ ತಾಲೂಕಿನ ಕಂತೂರು ಗ್ರಾಮದ ಬಾಲಾಜೆ ನಿವಾಸಿಯಾದ ಅವರು ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ 8 ವರ್ಷಗಳ ಕಾಲ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
2023ರಲ್ಲಿ ಉಪ್ಪಿನಂಗಡಿಯಲ್ಲಿ G.K ಟ್ಯಾಕ್ಸ್ ಸೊಲ್ಯುಷನ್ಸ್ ಎಂಬ ಸ್ವಂತ ಸಂಸ್ಥೆಯನ್ನು ಮುನ್ನಡೆಸುತ್ತಾ ಬಂದಿದ್ದಾರೆ.ವ್ಯವಹಾರ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ,ಈ ಸಂದರ್ಭದಲ್ಲಿ ಜೇಸಿಐ ಆಲಂಕಾರು ಘಟಕದ ಅಧ್ಯಕ್ಷ ಜೇಸಿ ಮಹೇಶ್ ಪಾಟಾಳಿ, ಕಾರ್ಯದರ್ಶಿ ಜೇಸಿ ಜನಾರ್ದನ್ ಸುರ್ಯ,ಮಹಿಳಾ ಜೇಸಿ ಸಂಯೋಜಕಿ ಜೇಸಿ ಕೃತಿಕಾ ಟಿ.ರೈ,ನಿಕಟಪೂರ್ವಾಧ್ಯಕ್ಷ ಜೇಸಿ ಗುರುರಾಜ್ ರೈ,ವಲಯಾಧಿಕಾರಿ ವಿನೀತ್ ಶಗ್ರಿತ್ತಾಯ,ಪೂರ್ವಾಧ್ಯಕ್ಷ ಜೇಸಿ ಗುರುಪ್ರಸಾದ್ ರೈ,ಸದಸ್ಯರುಗಳಾದ ಜೇಸಿ ಧನ್ಯಶ್ರೀ ರೈ ,ಜೇಸಿ ಶ್ರುತಿ ಪ್ರಸಾದ್ ರೈ ಹಾಗೂ ಜೇಸಿ ಸುನೀತಾ ಜಿ.ರೈ ಉಪಸ್ಥಿತರಿದ್ದರು.















