ಪುಣ್ಚಪ್ಪಾಡಿಯಲ್ಲಿ 38ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಬಿಡುಗಡೆ

0

ಪುತ್ತೂರು : ಪುಣ್ಚಪ್ಪಾಡಿ 38ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸೆ. 14ರಂದು ನಡೆಯುವ ಕಾರ್ಯಕ್ರಮದ ಬಗ್ಗೆ ಆ.23 ರಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಪುಣ್ಚಪ್ಪಾಡಿ ಗೌರಿ ಸದನ ಸಭಾಂಗಣದಲ್ಲಿ ಜರಗಿತು.

ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಉತ್ಸವ ಸಮಿತಿಯ ಅಧ್ಯಕ್ಷ ಮಹೇಶ್‌ ಕೆ ಸವಣೂರು, ಕಾರ್ಯದರ್ಶಿ ಪ್ರಮೋದ್‌ ಬೊಳ್ಳಾಜೆ, ಜೊತೆ ಕಾರ್ಯದರ್ಶಿ ನಿತಿನ್‌ ಪೂಜಾರಿಮೂಲೆ, ಉಪಾಧ್ಯಕ್ಷ ವಸಂತ ಗೌಡ ಬೆದ್ರಂಪಾಡಿ, ಕೋಶಾಧಿಕಾರಿ ಯತೀಶ್‌ ಕೊಂಬಕೆರೆ, ಗೌರಿ ಗಣೇಶ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸಚಿನ್‌ ಕುಮಾರ್‌ ಜೈನ್‌, ಪ್ರಮುಖರಾದ ರಾಜೇಶ್ವರಿ ಕೆ ಕನ್ಯಾಮಂಗಲ, ಶೀನಪ್ಪ ಶೆಟ್ಟಿ ನೆಕ್ಕರಾಜೆ, ನ್ಯಾಯವಾದಿ ನೋಟರಿ ಮಹಾಬಲ ಶೆಟ್ಟಿ ಕೊಮ್ಮಂಡ, ಬಾಲಕೃಷ್ಣ ರೈ ದೇವಸ್ಯ, ಕರುಣಾಕರ ಸಾರಕರೆ, ಲಿಂಗಪ್ಪ ರೈ ಚೆಂಬುತ್ತೋಡಿ, ಸಂಪತ್‌ ಕುಮಾರ್‌ ಇಂದ್ರ, ಮೋಹಿತ್‌ ಕೆ ಕುಮಾರಮಂಗಲ, ತೀರ್ಥನ್‌ ಬೊಳ್ಳಾಜೆ, ಪ್ರವೀಣ್‌ ಕುಮಾರ್‌ ನೂಜಾಜೆ, ಶೇಷಮ್ಮ ನೂಜಾಜೆ , ಆನಂದ ಕೆ ಕನ್ಯಾಮಂಗಲ, ಪುಟ್ಟಣ್ಣ ಗೌಡ ಪೂಜಾರಿಮೂಲೆ, ಪ್ರದೀಪ್‌ ಕುಮಾರ್ ಜೆ ನಾಯ್ಕ, ಚೆನ್ನಪ್ಪ ಗೌಡ ಬುಡನಡ್ಕ, ನಿತೇಶ್‌ ನೇರೋಳ್ತಡ್ಕ, ಅಖಿಲ ನೆಕ್ಕರಾಜೆ , ತೃಪ್ತಿ ರಾಮಕೃಷ್ಣ ಕನ್ಯಾಮಂಗಲ, ಜನಾರ್ಧನ ಕಟ್ಟತ್ತಾರು, ಕಟ್ಟೆ ಸಮಿತಿಯ ಅಧ್ಯಕ್ಷರಾದ ಕುಶಾಲಪ್ಪ ಗೌಡ ತುಂಬೆತ್ತಡ್ಕ, ಆಶಾ ರೈ ಕಲಾಯಿ, ರವಿಕುಮಾರ್‌ ಕೈತಡ್ಕ, ಮೊದಲಾದವರು ಉಪಸ್ಥಿತರಿದ್ದರು.

ಉತ್ಸವ ಸಮಿತಿಯ ಅಧ್ಯಕ್ಷರಾದ ಮಹೇಶ್‌ ಕೆ ಸವಣೂರು ಸ್ವಾಗತಿಸಿ ಕಾರ್ಯದರ್ಶಿ ಪ್ರಮೋದ್‌ ಬೊಳ್ಳಾಜೆ ವಂದಿಸಿದರು.

LEAVE A REPLY

Please enter your comment!
Please enter your name here