







ಪುತ್ತೂರು: ಕೋರ್ಟು ರೋಡ್‌ಲ್ಲಿ ಮಧ್ಯಾಹ್ನ ಹೊತ್ತಲ್ಲಿ ನಡೆದಾಡಿದರೆ ಸಾಕು… ಅರ್ಧ ಊಟ ಮಾಡಿದಷ್ಟೇ ಆನಂದ, ಉಲ್ಲಾಸ.. ಅದಕ್ಕೆ ಕಾರಣ ಕೋರ್ಟು ರಸ್ತೆಯಲ್ಲಿರುವ ಪಂಚರತ್ನ ಹೊಟೇಲ್. ಘಮ ಘಮಿಸುವ ಮೀನಿನ ಫ್ರೈ, ಕರು ಮುರು ಅನ್ನೋ ಶುದ್ಧ ತೆಂಗಿನ ಎಣ್ಣೆಯಿಂದ ತಯಾರಿಸಿದ ಪುಡಿ ಪುಡಿ ಮಸಾಲೆ… ಅಬ್ಬಾ ಗ್ರಹಿಸಿದರೆ ಬಾಯಲ್ಲಿ ನೀರೂರಿಸಿ ಚಪ್ಪರಿಸುವಂತಾಗುತ್ತದೆ. ಹೌದು ಇದು ಅತಿಶಯೋಕ್ತಿಯಲ್ಲ. ನಿಜವಾದ ಮೀನು ಪ್ರಿಯರಿಗೆ ಈ ಹೊಟೇಲ್ ಹೇಳಿ ಮಾಡಿದಂತಿದೆ.


ಇಲ್ಲಿ ಮನೆಯಲ್ಲೇ ಕುಟ್ಟಿ ಪುಡಿ ಮಾಡಿದ ಮಸಾಲೆಯಿಂದ ತಯಾರಿಸಿದ ಮೀನಿನ ಖಾದ್ಯಗಳು ಸ್ಪೆಷಲ್. ಉಳಿದಂತೆ ಚಿಕನ್ ಐಟಂಗಳು, ಬಿರಿಯಾನಿ ಐಟಂಗಳೂ ಇವೆ. ತಲಶ್ಯೇರಿ ಬಿರಿಯಾನಿ, ಆಂಧ್ರ ಬಿರಿಯಾನಿ, ಬೆಳಗಾಂ ಬಿರಿಯಾನಿ, ಧಮ್ ಬಿರಿಯಾನಿ ಹೀಗೆ ನಾನಾ ಪ್ರದೇಶಗಳ ಬಿರಿಯಾನಿ ಸ್ಪೆಷಲ್ ಇಲ್ಲಿ ದೊರೆಯುತ್ತವೆ. ಚಿಕನ್ ಪ್ರಿಯರಿಗೆ ಇಷ್ಟವಾಗುವ ಬೇರೆ ಬೇರೆ ಚಿಕನ್ ಖಾದ್ಯಗಳೂ ಇವೆ.



ನಗುಮುಖದ ಮಹಿಳಾ ಸರ್ವರ್‌ಗಳು:
ಈ ಹೊಟೇಲ್ ಇನ್ನೊಂದು ವಿಶೇಷತೆ ಅಂದರೆ ಇಲ್ಲಿ ಆರ್ಡರ್ ತೆಗೆಯುವವರು, ಸರ್ವ್ ಮಾಡುವವರು, ಕ್ಯಾಶ್ ಕೌಂಟರ್, ಕ್ಲೀನಿಂಗ್ ಎಲ್ಲದಕ್ಕೂ ಮಹಿಳಾ ಮಣಿಗಳೇ. ಸೀಟಲ್ಲಿ ಕುಳಿತೊಡನೆ ನಗುಮುಖದ ಲೇಡಿ ವೈಟರ್ ಕೈಯಲ್ಲೊಂದು ಟ್ಯಾಬ್ ಹಿಡಿದುಕೊಂಡು ಪಟ ಪಟಾಂತ ಐಟಂಗಳನ್ನು ಹೇಳ್ತಾರೆ. ನಿಮಗೆ ಬೇಕಾದ ಐಟಂಗಳು ಆರ್ಡರ್ ಮಾಡಿದೊಡನೆ ಟ್ಯಾಬ್‌ಲ್ಲಿ ಆರ್ಡರ್ ತಗೊಂಡು ಕಿಚನ್‌ಗೆ ರವಾನಿಸ್ತಾರೆ. ಅಷ್ಟೊತ್ತಿಗಾಗಲೇ ಬೆಚ್ಚಗಿನ ರುಚಿಕರವಾದ ‘ಉಪ್ಪು ತೆಲಿ’ ಬರುತ್ತದೆ. ಒಂದು ಸಿಪ್ ಕುಡಿದುಬಿಟ್ಟರೆ ಬಾಳೆಲೆ ರೆಡಿ. ಆಮೇಲೆ ಚಟ್ನಿ, ಪಲ್ಯ, ಊಟ ಬಡಿಸುವವರು, ಒಂದೆರಡು ತುತ್ತು ಬಾಯಿಗೆ ಹೋಯಿತಷ್ಟೇ.. ಅಷ್ಟರಲ್ಲೇ ಪ್ಲೇಟ್ ಪ್ಲೇಟ್ ಮೀನು ಫ್ರೈ, ಚಿಕನ್ ಎಲ್ಲವೂ ರೆಡಿಯಾಗುತ್ತದೆ. ಚುರುಕಿನ ಹೆಂಗಳೆಯರಿಂದ ಇವೆಲ್ಲವೂ ಚಕಚಕಾಂತ ಆಗಿಬಿಡ್ತದೆ.

ನೆಮ್ಮದಿಯ ಸಮಯ, ಸಂತೃಪ್ತಿಯ ಊಟ:
ಇಲ್ಲಿ ಊಟಕ್ಕೆ ಕುಳಿತರೆ ಗ್ರಾಹಕರಿಗೆ ಏನೋ ಒಂದು ಸಂತೃಪ್ತಿಯ ಊಟ. ಈ ಹೊಟೇಲ್ ಮಾಲೀಕರು ಹೇಳುವಂತೆ ಪುತ್ತೂರಿನ ಜನರಿಗೆ ಸ್ಟಾರ್ ಹೊಟೇಲ್‌ಗಳ ರೆಸಿಪಿ ಸಿಗಬೇಕು. ಊಟದ ಸಮಯ ನೆಮ್ಮದಿಯಾಗಿರಬೇಕು. ಊಟ ತೃಪ್ತಿದಾಯಕವಾಗಿರಬೇಕು. ಈ ಉದ್ದೇಶವನ್ನು ಈಡೇರಿಸುವಲ್ಲಿ ಮಾಲಕರು ಸಫಲರಾಗಿದ್ದಾರೆ. ಇಲ್ಲಿಗೆ ಒಮ್ಮೆ ಬರುವ ಗ್ರಾಹಕರು ಮತ್ತೆ ಮತ್ತೆ ಬರುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ವಿಶಾಲ ಆಸನ ವ್ಯವಸ್ಥೆ
ಪಂಚರತ್ನದಲ್ಲಿ ಈ ಮೊದಲು ಸೀಮಿತ ಆಸನ ವ್ಯವಸ್ಥೆಗಳಿತ್ತು. ಮಧ್ಯಾಹ್ನ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿಯಿತ್ತು. ಆದರೆ ಈಗ ಇದು ಫ್ಯಾಮಿಲಿ ಕ್ಯಾಬಿನ್ ಜೊತೆಗೂಡಿ ವಿಶಾಲ ಜಾಗದಲ್ಲಿ ಸಾಕಷ್ಟು ಆಸನ ವ್ಯವಸ್ಥೆಗಳನ್ನು ಹೊಂದಿದೆ. ಇದಕ್ಕೆ ಇಲ್ಲಿನ ಖಾಯಂ ಗ್ರಾಹಕರು ಫುಲ್ ಖುಷ್ ಆಗಿಬಿಟ್ಟಿದ್ದಾರೆ.
ಹೊಟೇಲ್ ಪಂಚರತ್ನವನ್ನು ಸಂಪರ್ಕಿಸಲು : ರಾಧಾ’ಸ್ ಜವುಳಿ ಮಳಿಗೆ ಹತ್ತಿರ, ಲಕ್ಷ್ಮಿ ಜ್ಯುವೆಲ್ಸ್ ಎದುರುಗಡೆ, ಕೋರ್ಟ್ ರಸ್ತೆ ಪುತ್ತೂರು -80504 57329

ಹೋಟೆಲ್‌ನ ವಿಶೇಷತೆ ವೀಕ್ಷಣೆಗೆ ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ










