







ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಶ್ರೀ ಕ್ಷೇತ್ರ ರಾಮಗಿರಿ ಶ್ರೀ ರಾಮ ಭಜನಾ ಮಂದಿರದ 45ನೇ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.14 ರಿಂದ 16ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆ.23ರಂದು ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.


ಆರಂಭದಲ್ಲಿ ಶ್ರೀ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.



ಶ್ರೀ ರಾಮ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರತನ್ ರೈ ಕುಂಬ್ರ, ಕೋಶಾಧಿಕಾರಿ ಅಂಕಿತ್ ರೈ ಕುಯ್ಯಾರು, ಕಾರ್ಯದರ್ಶಿ ರಾಜ್ಪ್ರಕಾಶ್ ರೈ ಕುಂಬ್ರ, ಲೆಕ್ಕ ಪರಿಶೋಧಕ ಶೇಖರ ರೈ ಕುರಿಕ್ಕಾರ, ಜತೆ ಕಾರ್ಯದರ್ಶಿ ಉದಯ ಮಡಿವಾಳ ಕುಂಬ್ರ, ಉಪಾಧ್ಯಕ್ಷರಾದ ಜಗನ್ನಾಥ ಪೂಜಾರಿ ಮುಡಾಲ, ಸದಾಶಿವ ಶೇಖಮಲೆ, ಮಾಜಿ ಅಧ್ಯಕ್ಷರಾದ ದುರ್ಗಾಪ್ರಸಾದ್ ರೈ, ಗಂಗಾಧರ ರೈ ಕುಯ್ಯಾರು, ಶ್ಯಾಮ್ ಸುಂದರ್ ರೈ ಕೊಪ್ಪಲ, ಸುಂದರ್ ರೈ ಮಂದಾರ, ರಾಜೇಶ್ ರೈ ಪರ್ಪುಂಜ, ಅರುಣ್ ರೈ ಬಿಜಲ, ಮೋಹನ್ದಾಸ್ ರೈ ಕುಂಬ್ರ, ನಾರಾಯಣ ಪೂಜಾರಿ ಕುರಿಕ್ಕಾರ, ನಿತೀಶ್ ಶಾಂತಿವನ , ದಿನೇಶ್ ಪಂಜಿಗುಡ್ಡೆ, ರಮೇಶ್ ಬೊಳ್ಳಾಡಿ, ಶ್ರೀನಿವಾಸ ಮುಡಾಲಮೂಲೆ, ದಿಲೀಪ್ ರೈ, ಕೊರಗಪ್ಪ ಪೂಜಾರಿ, ಉಷಾ ನಾರಾಯಣ್, ಮಲ್ಲಿಕಾ ಸುಂದರ್ ರೈ, ತೃಪ್ತಿ ರತನ್ ರೈ, ಲೀಲಾವತಿ ರೈ, ರಾಜೀವಿ, ರಶ್ಮಿ ದಿಲೀಪ್, ಅಕ್ಷತಾ ಶೈಲೇಶ್ ರೈ,ಆಶಾ ಮಾಧವ ರೈ, ಅಶೋಕ್ ಬಡೆಕ್ಕೋಡಿ, ಆದರ್ಶ್ ಶೆಟ್ಟಿ ನಿರಾಳ, ವಸಂತಿ, ಲಲಿತಾ, ಗೀತಾ,ಸದಾನಂದ ಆಚಾರ್ಯ ಮತ್ತು ಬೃಂದಾವನ ನಾಟ್ಯಾಲಯದ ವಿದ್ಯಾರ್ಥಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.










