







ಪುತ್ತೂರು: ಇರ್ದೆ ಗ್ರಾಮದ ದೂಮಡ್ಕ ಎಂಬಲ್ಲಿರುವ ಸೀರೆ ಹೊಳೆಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ತುಂಬಿ ಹರಿವ ನೀರಲ್ಲಿ ಈಜಿ ಸಾಹಸಮಯವಾಗಿ ಕಾರ್ಯಚರಣೆ ನಡೆಸಿ ದುರಸ್ತಿ ಪಡಿಸುವ ಮೂಲಕ ಸುಮಾರು 12 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಬೆಟ್ಟಂಪಾಡಿ ಶಾಖೆಯ ಸಹಾಯಕ ಪವರ್ ಮ್ಯಾನ್ ಗಳಾದ ಬಂದೆ ನವಾಜ್, ಪ್ರವೀಣ್, ಬಸವರಾಜ್ ಮತ್ತು ವಿದ್ಯುತ್ ಸರಬರಾಜು ಕಂಪೆನಿಗಳ ಅಂತರ ಕಂಪೆನಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿರುವ ಸವಣೂರು ಶಾಖೆಯ ಮೇಲ್ವಿಚಾರಕಿ ವಿಜಯ ಅವರನ್ನು ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪವಿಭಾಗ ಕಚೇರಿ, ಕುಂಬ್ರದಲ್ಲಿ ಸನ್ಮಾನಿಸಲಾಯಿತು.


ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಸಿ.ಹೆಚ್. ಶಿವಶಂಕರ, ಸಹಾಯಕ ಇಂಜಿನಿಯರ್ ಗುರುದೇವಿ ಮಂತ್ರಣ್ಣನವರ್, ಶಾಖಾಧಿಕಾರಿಗಳ ರವೀಂದ್ರ, ಪುತ್ತು ರಮೇಶ್, ರಾಜೇಶ್ ಮತ್ತು ಪವರ್ ಮ್ಯಾನ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.













