ಉಪ್ಪಿನಂಗಡಿ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಾಮಾನ್ಯ ಸಭೆ

0

ರೂ. 37.48 ಕೋಟಿ ವ್ಯವಹಾರ, ರೂ 6.94 ಲಕ್ಷ ಲಾಭ, ಶೇ. 7 ಡಿವಿಡೆಂಡ್

ಉಪ್ಪಿನಂಗಡಿ :ಉಪ್ಪಿನಂಗಡಿ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 2025-26 ನೇ ಸಾಲಿನಲ್ಲಿ ರೂ. 6.94 ಲಕ್ಷ ಲಾಭ ಗಳಿಸಿ ಸದಸ್ಯರಿಗೆ ಶೇ. 7 ಡಿವಿಡೆಂಡ್‌ ಅನ್ನು ಸಾಮಾನ್ಯ ಸಭೆಯಲ್ಲಿ ನೀಡುವುದೆಂದು ಸಹಕಾರಿಯ ಅಧ್ಯಕ್ಷ ಮ್ಯಾಕ್ಸಿಂ ಲೋಬೊ ತಿಳಿಸಿದರು.


ಆಗಸ್ಟ್ 23 ರಂದು ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಮಿನಿ ಹಾಲ್ ನಲ್ಲಿ ನಡೆದ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವರ್ಷಾಂತ್ಯದಲ್ಲಿ 44,63,4೦೦.೦೦ ಪಾಲು ಬಂಡವಾಳ ಸಂಗ್ರಹವಾಗಿದ್ದು ರೂ. 9,94,68,845.33 ಠೇವಣಿಯು ವಿವಿಧ ಖಾತೆಗಳಲ್ಲಿ ಜಮೆ ಇರುತ್ತದೆ. ಆರ್ಥಿಕ ವರ್ಷದ ಕೊನೆಗೆ ನಮ್ಮ ಸಹಕಾರಿ ಸಂಘವು ರೂ.37,48,89,265.42 ವ್ಯವಹಾರವನ್ನು ಮಾಡಿದ್ದು 6.94ಲಕ್ಷ ಲಾಭ ಬಂದಿರುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.


ಅಧಿಕ ಮೊತ್ತದ ಠೇವಣಿಯನ್ನು ತೊಡಗಿಸಿದ ಸದಸ್ಯರು ನಿರ್ದೇಶಕ ರೋಬರ್ಟ್ ಡಿಸೋಜ ಮತ್ತು ಸಬೆಸ್ಟಿಯನ್ ರವರನ್ನು ಗೌರವಿಸಲಾಯಿತು. ಸಹಕಾರಿ ಸಂಘದ ಕಾನೂನು ಸಲಹೆಗಾರ ,ಪ್ರಸ್ತುತ ಪುತ್ತೂರು ವಕೀಲರ ಸಂಘಕ್ಕೆ ಅಧ್ಯಕ್ಷ ನ್ಯಾಯಾವಾದಿ ಸಂತೋಷ್ ಕುಮಾರ್ ಎಮ್ ಇವರನ್ನು ಗೌರವಿಸಲಾಯಿತು. ಹಾಗೆಯೇ ಸಂಘದ ಸಿಬ್ಬಂದಿ ಹಾಗೂ ಪಿಗ್ಮಿ ಸಂಗ್ರಾಹಕರಿಗೆ ನೆನಪಿನ ಕಾಣೀಕೆಯನ್ನು ನೀಡಿ ಗೌರವಿಸಲಾಯಿತು.‌


ಸಹಕಾರಿಯ ಉಪಾಧ್ಯಕ್ಷ ಜೆರೋಮ್ ಬ್ರ್ಯಾಗ್ಸ್ ನಿರ್ದೆಶಕರಾದ ರೋಬರ್ಟ್ ಡಿಸೋಜ,, ಹೆನ್ರಿ ಲೋಬೊ, ವಿನ್ಸೆಂಟ್  ಕೆನ್ಯೂಟ್ ಮಿನೇಜಸ್, ಸಿಲ್ವೆಸ್ಟರ್ ವೇಗಸ್, ಸೆಬೆಸ್ಟಿಯನ್ ಲೋಬೊ , ವಿನ್ಸೆಂಟ್ ಬ್ರ್ಯಾಗ್ಸ್, ವಿನ್ಸೆಂಟ್ ವೇಗಸ್, ಯೊಹನ್ನಾನ್ ಎ ಯು, ಐರಿನ್ ಲೋಬೊ, ಫೆಲ್ಸಿ ಡಿ ಸೋಜ ರವರು ಸಭೆಯಲ್ಲಿ ಹಾಜರಿದ್ದರು.

ಸಂಘದ ಸಿಬ್ಬಂಧಿಗಳಾದ ತನುಶ್ರೀ, ಹರ್ಷಿತಾ ,ಲಿಖಿತ ಎ ಯು ಹಾಗೂ ಸಿರಿಲ್ ಪಿಂಟೊ ಪ್ರಾರ್ಥಿಸಿದರು . ಸಹಕಾರಿಯ ಅಧ್ಯಕ್ಷ ಮ್ಯಾಕ್ಸಿಂ ಲೋಬೊ ಸ್ವಾಗತಿಸಿದರು. ಕಡಬ ಶಾಖೆಯ ವ್ಯವಸ್ಥಾಪಕ ಜೋನ್ಸಿ ಡಿ ಸೋಜಾ ಹಿಂದಿನ ಸಭೆಯ ನಡವಳಿಗಳನ್ನು ವಾಚಿಸಿದರು ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿಲ್ಪ್ರೆಡ್  ಡಿ ಸೋಜಾರವರು 2025-26ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಸಭೆಯ ಮುಂದಿರಿಸಿದರು. ಲಾಭ ನಷ್ಟ ಹಾಗೂ ಆಸ್ತಿ ಜವಬ್ದಾರಿ ತಖ್ತೆಯನ್ನು ಸಭೆಯಲ್ಲಿ ಕೇಂದ್ರ ಕಛೇರಿಯ ಲೆಕ್ಕಿಗ ಸಂತೋಷ್ ಪಿಂಟೊ ರವರು ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು.

2025 -26 ನೇ ಸಾಲಿನ ಅಂದಾಜು ಮುಂಗಡ ಬಜೆಟನ್ನು ನೆಲ್ಯಾಡಿ ಶಾಖೆಯ ವ್ಯವಸ್ಥಾಪಕ ಶ್ರೇಯಸ್ ಎಸ್ ಶೆಟ್ಟಿ ರವರು ಸಭೆಯ ಮುಂದಿಟ್ಟರು. ಸಂಘದ ಲೆಕ್ಕಿಗ ಸಂತೋಷ್ ಪಿಂಟೊ ರವರು ಕಾರ್ಯ ನಿರೂಪಿಸಿ ಲೆಕ್ಕ ಪತ್ರಗಳನ್ನು ಮಂಡಿಸಿದರು..ಪಿಗ್ಮಿ ಸಂಗ್ರಹಕರಾದ ಚಂದ್ರಶೇಖರ ಕೆ, ಸೋಮನಾಥ, ಸಿರಿಲ್ ಪಿಂಟೊ ಹಾಗೂ ಅಬ್ದುಲ್ ಶುಕೂರ್ ರವರು ಸಹಕರಿಸಿದರು.

LEAVE A REPLY

Please enter your comment!
Please enter your name here