






ಪುತ್ತೂರು:ದ್ವಿಚಕ್ರ ವಾಹನದಲ್ಲಿ ಕರೆದೊಯ್ದು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಅದ್ದು ಪಡೀಲ್ ಎಂಬಾತನ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿದೆ.
ಆ.23ರಂದು ರಾತ್ರಿ ವೇಳೆ ಸಂತ್ರಸ್ತ ಬಾಲಕಿಯನ್ನು ಕಾರ್ಯಕ್ರಮವೊಂದರಿಂದ ಆಕೆಯ ಮನೆಗೆ ಬಿಡುವ ಸಲುವಾಗಿ ತನ್ನ ದ್ವಿಚಕ್ರ ವಾಹನದಲ್ಲಿ ಕರೆತರುತ್ತಾ ದಾರಿ ಮಧ್ಯೆ ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.
ಘಟನೆ ಕುರಿತು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಅದ್ದು ಪಡೀಲ್ ವಿರುದ್ಧ ಕಲಂ75 ಬಿಎನ್‌ಎಸ್ 2023 ಮತ್ತು ಕಲಂ 8,12 ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.












