






ನಾವು ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡ್ತೇವೆ, ಯಾವುದೇ ತಪ್ಪು ಇಲ್ಲ – ಎಸ್.ಪಿ


ಪುತ್ತೂರು: ಪುತ್ತೂರಿನಲ್ಲಿ ಈದ್ ಮಿಲಾದ್ ಹಬ್ಬ ಮತ್ತು ಹಿಂದು ಸಂಘಟನೆಗಳ ಮುಷ್ಕರಕ್ಕೆ ಸಂಬಂಧಿಸಿ ದ.ಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಅವರು ಪುತ್ತೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.



ಈ ವೇಳೆ ಮಾದ್ಯಮದೊಂದಿಗೆ ಮಾತನಾಡಿದ ಎಸ್.ಪಿ ಜಿಲ್ಲೆಯಲ್ಲಿ ಎಲ್ಲಾ ಶಾಂತ ರೀತಿಯಿಂದ ಈದ್ ಮಿಲಾದ್ ಮೆರವಣಿಗೆ ನಡೆದಿದೆ. ಪುತ್ತೂರಿನಲ್ಲೂ ಬೆಳಗ್ಗೆ ಶಾಂತ ರೀತಿಯಿಂದ ಈದ್ ಮಿಲಾದ್ ಮೆರವಣಿಗೆ ನಡೆದಿದೆ. ಹೆಚ್ಚಿನ ಭದ್ರತೆಯ ದೃಷ್ಟಿಯಿಂದ ಪುತ್ತೂರು ನಗರದಲ್ಲಿ ಹೆಚ್ಚಿನ ಪೊಲೀಸ್ ತುಕುಡಿಗಳನ್ನು ಹಾಕಲಾಗಿದೆ. ಈವರೆಗೆ ಯಾವುದೇ ಒತ್ತಾಯ ಪೂರ್ವಕ ಬಂದ್ ಆಗಿಲ್ಲ. ಬದಲಾಗಿ ಸ್ವಯಂ ಪ್ರೇರಿತ ಬಂದ್ ಆಗಿದೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಪುತ್ತೂರಿನಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸಂಘಟನೆ ಸ್ವಯಂ ಪ್ರೇರಿತ ಬಂದ್ ಕರೆ ಕೊಟ್ಟಿದ್ದಾರೆ, ಕೆಲವರು ಬಂದ್ ಮಾಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ನಾವು ನೋಟೀಸ್ ಕೊಟ್ಟು ವಿಚಾರಣೆ ಮಾಡ್ತೇವೆ. ನಾವು ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡ್ತೇವೆ, ಯಾವುದೇ ತಪ್ಪು ಇಲ್ಲ ಎಂದು ತಿಳಿಸಿದರು.
ಡಿವೈಎಸ್ಪಿ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.










