






ಪುತ್ತೂರು: ಪುತ್ತೂರು ರೋಟರಿ ಕ್ಲಬ್ ಎಲೈಟ್ ನಿಂದ ಪ್ರತಿ ಹಬ್ಬದ ಸಂದರ್ಭ “ನಮ್ಮ ಹಬ್ಬ ನಮ್ಮ ಸೇವೆ” ಕಾರ್ಯಕ್ರಮದಡಿ ಈದ್ ಮೀಲಾದ್ ಪ್ರಯುಕ್ತ ಪುತ್ತೂರು ಸರಕಾರಿ ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಆ.25 ರಂದು ಹಣ್ಣು ಹಂಪಲು ವಿತರಣೆ ಮಾಡಿದರು.
ರೋಟರಿ ಕ್ಲಬ್ ಎಲೈಟ್ ಅಧ್ಯಕ್ಷ ವಕೀಲ ಮಹಮ್ಮದ್ ಶಾಕೀರ್ ಅವರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್ ಅವರ ಮೂಲಕ ಮಕ್ಕಳ ವಾರ್ಡ್ ನಲ್ಲಿದ್ದ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿದರು. ಈ ಸಂದರ್ಭ ಕಾರ್ಯದರ್ಶಿ ಸುಶಾಂತ್ ಹಾರ್ವಿನ್, ಕೋಶಾಧಿಕಾರಿ ಮತ್ತು ನಮ್ಮ ಹಬ್ಬ ನಮ್ಮ ಸೇವಾ ವಿಭಾಗದ ಜಿಲ್ಲಾ ಸಂಘಟಕ ಮೌನೇಶ್ ವಿಶ್ವಕರ್ಮ, ರಾಮ ಕೆ, ಆಸ್ಕರ್, ಆನಂದ್ ಉಪಸ್ಥಿತರಿದ್ದರು.












