ಮಿತ್ತೂರು ಸಮೀಪ ಭೀಕರ ಅಪಘಾತ – ಕಲ್ಲೇಗ ಮುರ ನಿವಾಸಿ ಯುವಕ ಹರ್ಷದ್ ನಿಧನ

0

ಪುತ್ತೂರು: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಲ್ಲೇಗ ಸಮೀಪದ ಮುರ ನಿವಾಸಿ ಹರ್ಷದ್ ಎಂಬವರು ದುರಂತವಾಗಿ ನಿಧನರಾಗಿದ್ದಾರೆ.

ಮೃತ ಯುವಕ ಹರ್ಷದ್ ಅವರು ಕಲ್ಲೇಗ ಜುಮಾ ಮಸೀದಿ ಜಮಾಅತ್‌ಗೆ ಒಳಪಟ್ಟ ಮುರ ನಿವಾಸಿ, ಮರ್ಹೂಮ್ ರಝಾಕ್ ಸಾಹೇಬ್ ಅವರ ಪುತ್ರ ಹಾಗೂ ಇರ್ಷಾದ್ ಅವರ ಸಹೋದರ. ಇವರು ನೆಹರು ನಗರದ ‘ರೆಕ್ಸಾ ಶಾಪ್’ನಲ್ಲಿ ಉದ್ಯೋಗಿಯಾಗಿದ್ದರು.

ಇಂದು ಪರ್ಲೋಟು ಸಮೀಪ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಹರ್ಷದ್ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಯುವಕನ ಅಕಾಲಿಕ ನಿಧನಕ್ಕೆ ಸ್ಥಳೀಯರು ಹಾಗೂ ಕಲ್ಲೇಗ ಜಮಾಅತ್ ಬಂಧುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here