ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

0

ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಆ.25ರಂದು ಸಂಘದ ಆವರಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಿದಾನಂದ ಸುವರ್ಣ ಗೆಣಸಿನಕುಮೇರು ಮಾತನಾಡಿ, ಸಂಘವು ವರದಿ ಸಾಲಿನಲ್ಲಿ 266 ಸದಸ್ಯರಿಂದ ರೂ.68,100 ಪಾಲು ಬಂಡವಾಳವನ್ನು ಹೊಂದಿದೆ. ಹಾಲು ಉತ್ಪಾದಕರಿಂದ 80,793.33ಲೀಟರ್ ಹಾಲು ಖರೀದಿಸಿದೆ. 10,102.70 ಲಿಟರ್ ಹಾಲ ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. 73,256 ಲೀಟರ್ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಿದ್ದು ರೂ.36,37,170.74 ಆದಾಯ ಬಂದಿದೆ. 331 ಚೀಲ ಪಶು ಆಹಾರ ಮತ್ತು 212 ಕೆಜಿ ಲವಣ ಮಿಶ್ರಣ ಹಾಗೂ 88 ಕೆಜಿ ಸಂವೃದ್ಧಿ ಮಾರಾಟದಿಂದ ರೂ.16,171.44 ಆದಾಯ ಬಂದಿದೆ. ರೂ.59,176.55 ಇತರ ಜಮೆಯಾಗಿದೆ. ಸಿಬ್ಬಂದಿ ವೇತನ, ಸಾದಿಲ್ವಾರು ಖರ್ಚು ರೂ.1,74,378 ಹಾಗೂ 73,896 ಸವಕಲಿ ನಿಧಿಗೆ ಹಾಗೂ ರೂ.4500 ಲೆಕ್ಕಪರಿಶೋಧನ ಶುಲ್ಕಕ್ಕೆ ಖಾದಿರಿಸಲಾಗಿದೆ.ಎಲ್ಲಾ ಖರ್ಚು ಕಳೆದು ಸಂಘವು ರೂ.33,339.16 ನಿವ್ವಳ ಲಾಭ ಗಳಿಸಿದ್ದು ಸದಸ್ಯರು ಶೇ.5 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 19 ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು.

ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವಿದ್ಯಾ ಅವರು ಮಾತನಾಡಿ, ಹೈನುಗಾರಿಕೆಗೆ ಸರಕಾರ ಹಾಗೂ ಒಕ್ಕೂಟದಿಂದ ದೊರೆಯುವ ವಿವಿಧ ಸವಲತ್ತುಗಳು ಮತ್ತು ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ವೈದ್ಯಾಧಿಕಾರಿ ಡಾ.ಅನುದೀಪ್ ಮಾತನಾಡಿ, ವೈಜ್ಞಾನಿಕ ವಿಧಾನಗಳ ಮೂಲಕ ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸುವಂತೆ ಸಲಹೆ ನೀಡಿದರು.


ಸದಸ್ಯರ ಬೇಡಿಕೆಗಳು:
ನೆರೆಯ ರಾಜ್ಯಗಳಲ್ಲಿರುವ ಹಾಲಿನ ದರಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಹಾಲಿನ ದರ ತೀರಾ ಕಡಿಮೆಯಾಗಿದೆ. ಹಾಳಿನ ಉತ್ಪಾದನಾ ವೆಚ್ಚವೇ ಅಧಿಕವಾಗಿದ್ದು ದರ ಏರಿಕೆ ಮಾಡವೇಕು. ಹಾಲಿನ ದರ ಕಡಿಮೆ ಇರುವಾಗ ಹಿಂಡಿಯ ದರ ಏರಿಕೆ ಮಾಡಬೇಕು. ಅಧಿಕ ಹಾಲು ನೀಡುವ ಉತ್ತಮ ತಳಿಯ ದನಗಳನ್ನು ದೂರದ ಈರೋಡ್‌ನಿಂದ ಆಮದು ಮಾಡುವ ಬದಲು ಇಲ್ಲಿಯೇ ತಳಿಯ ಅಭಿವೃದ್ಧಿ ಪಡಿಸಬೇಕು. ಹೈನುಕಾರಿಕೆಯ ವೈಜ್ಞಾನಿಕ ವಿಧಾನಗಳ ಬಗ್ಗೆ ತರಬೇತಿ ನೀಡಬೇಕು. ಜಂತು ಹುಳಕ್ಕೆ ಕಾಲಕ್ಕೆ ಸರಿಯಾಗಿ ಔಷಧಿ ವಿತರಣೆಯಾಬೇಕು. ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಘವು ಲಾಭದತ್ತ ಸಾಗಿದೆ. ಹೀಗಾಗಿ ಅವರಿಗೆ ಬೋನಸ್ ನೀಡಬೇಕು ಎಂದು ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.


ಸನ್ಮಾನ, ಬಹುಮಾನ ವಿತರಣೆ:
ಸಂಘದ ಸ್ಥಾಪಕಾಧ್ಯಕ್ಷ ಎನ್. ಗೋಪಾಲ ಭಟ್, ಮಾಜಿ ಅಧ್ಯಕ್ಷರಾದ ಜಿ. ಮಹಾಬಲ ರೈ ವಳತ್ತಡ್ಕ, ಉಮೇಶ್ ಗೌಡ ಪಿಲಿಗುಂಡ, ರಾಮಚಂದ್ರ ಪ್ರಭು, ಪ್ರಭಾರ ಕಾರ್ಯದರ್ಶಿ ದೀಪ್ತಿ ಚರಣ್, ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಂಶೀ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಸದಸ್ಯರಾದ ಶಶಿಕಲಾ ಎನ್.ಪಿ(ಪ್ರ), ಮಹಾಲಿಂಗ ನಾಯ್ಕ ಮಚ್ಚಿಮಲೆ(ದ್ವಿ), ಗುಲಾಬಿ(ತೃ) ಬಹುಮಾನ ನೀಡಲಾಯಿತು. ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಸನ್ಮಾನ ಸ್ವೀಕರಿಸಿದ ಸ್ಥಾಪಕ ಅಧ್ಯಕ್ಷ ಗೋಪಾಲ ಭಟ್ ಹಾಗೂ ಮಹಾಬಲ ರೈ ವಳತ್ತಡ್ಕ ಅವರು ಮಾತನಾಡಿ ಸಂಘ ಬೆಳೆದು ಬಂದ ಹಾದಿಯನ್ನು ತಿಳಿಸಿದರು.


ಉಪಾಧ್ಯಕ್ಷ ಜಗನ್ನಾಥ ರೈ, ಕೃಷ್ಣಪ್ಪ ನಾಯ್ಕ, ರಾಧಾಕೃಷ್ಣ ಜಿ., ಪುರುಷೋತ್ತಮ ನಾಯಕ್, ವಿಠಲ ಮಡಿವಾಳ, ಬಾಲಕೃಷ್ಣ ಪೂಜಾರಿ, ಶಾರದಾ ಹಾಗೂ ಲೋಕಯ್ಯ ನಾಯ್ಕವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕರಾದ ನಯನಾ ಸ್ವಾಗತಿಸಿದರು. ಗುಲಾಬಿ ವಂದಿಸಿದರು. ಕಾರ್ಯದರ್ಶಿ ಸಂಧ್ಯಾ ವಾರ್ಷಿಕ ವರದಿ ಹಾಗೂ ಆಯ-ವ್ಯಯಗಳನ್ನು ಮಂಡಿಸಿದರು. ಹಾಲು ಪರೀಕ್ಷಕಿ ಗೀತಾ ಸಹಕರಿಸಿದರು. ಮೋಹನ್ ಕುಮಾರ್ ಅಂಬಳಗುತ್ತು ಕಾರ್ಯಕ್ರಮ ನಿರೂಪಿಸಿದರು. ಕುಂಜೂರು ಪಂಜ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಾದ ಲಿತ ಹಾಗೂ ಸಾನ್ವಿಕಾ ಪ್ರಾರ್ಥಿಸಿದರು.


ಕುಂಜೂರುಪಂಜ ಸಂಘವನ್ನು ಕಷ್ಟಪಟ್ಟು ಬೆಳಸಲಾಗಿದೆ. ಸಂಘವು ಈಗ ಲಾಭ ಗಳಿಸುವತ್ತ ಹೆಜ್ಜೆಯಿಟ್ಟಿದೆ. ಈ ವರ್ಷ ಸದಸ್ಯರಿಗೆ ಡಿವಿಡೆಂಡ್ ಹಾಗೂ ಬೋನಸ್ ನೀಡಲಾಗುತ್ತಿದೆ. ಜೊತೆಗೆ ಇದೇ ಮೊದಲ ಬಾರಿಗೆ ಸಂಘದ ಮಾಜಿ ಅಧ್ಯಕ್ಷರುಗಳನ್ನು ಗೌರವಿಸಲಾಗಿದೆ. ಶೈಕ್ಷಣಿಕವಾಗಿ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ. ಸದಸ್ಯರು ಹೈನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು ಗುಣಮಟ್ಟದ ಹಾಲನ್ನೇ ಸಂಘಕ್ಕೆ ಪೂರೈಸುವ ಮೂಲಕ ಸಂಘದ ಬೆಳವಣಿಗೆಗೆ ಕೊಡುಗೆ ನೀಡಿದಾಗ ಮುಂದಿನ ದಿನಗಳಲ್ಲಿ ಇನ್ನಷ್ಟು ಲಾಭ ಪಡೆಯುವ ಮೂಲಕ ಡಿವಿಡೆಂಡ್ ಹಾಗೂ ಬೋನಸ್‌ನ್ನು ನೀಡಲಾಗುವುದು.
ಚಿದಾನಂದ ಸುವರ್ಣ ಗೆನಸಿನಕುಮೇರು, ಅಧ್ಯಕ್ಷರು

LEAVE A REPLY

Please enter your comment!
Please enter your name here