ರಸ್ತೆ ಅಪಘಾತ : ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಎನ್.ಡಿ.ಆರ್.ಎಫ್ ತಂಡ

0

ಪುತ್ತೂರು: Community Awareness ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದ ಎನ್.ಡಿ.ಆರ್.ಎಫ್ ತಂಡವು ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣದ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದೆ.

ಮಾರುತಿ ಬಲೆನೋ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಬಲೆನೋ ಚಾಲಕನಿಗೆ ತಲೆಗೆ ಗಂಭೀರ ಗಾಯವಾಗಿ ಹೆಚ್ಚಿನ ರಕ್ತಸ್ರಾವವಾಗುತ್ತಿತ್ತು. ಗಾಯಾಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಸ್ಥಳದಲ್ಲಿ ಜನ ಸೇರಿದ್ದರೂ ವೈದ್ಯಕೀಯ ನೆರವು ಸಿಗುತ್ತಿರಲಿಲ್ಲ. ಗಂಭೀರ ಸ್ಥಿತಿ ಗಮನಿಸಿದ ಎನ್.ಡಿ.ಆರ್.ಎಫ್ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ರಕ್ತಸ್ರಾವವನ್ನು ಒತ್ತಡ ಮತ್ತು ಡ್ರೆಸ್ಸಿಂಗ್ ಮೂಲಕ ನಿಯಂತ್ರಿಸಿ, ಮೂಲಭೂತ ಟ್ರಾಮಾ ಆರೈಕೆ ನೀಡಿ ಸ್ಥಿತಿಯನ್ನು ಸ್ಥಿರಗೊಳಿಸಿದರು. ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಎನ್.ಡಿ.ಆರ್.ಎಫ್ ತಂಡದ ಸಮಯೋಚಿತ ಸ್ಪಂದನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here