






ರಾಮಕುಂಜ: ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ, ಕವನ ಸ್ಪರ್ಧೆಗಳ ಫಲಿತಾಂಶ ಪ್ರಕಟವಾಗಿದ್ದು ವಿಜೇತರಿಗೆ ಆ.29ರಂದು ರಾಮಕುಂಜ ಶ್ರೀ ವಿಶ್ವೇಶತೀರ್ಥ ಸೌಧ ಸಭಾಂಗಣದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಸೇಸಪ್ಪ ರೈ ತಿಳಿಸಿದ್ದಾರೆ.
ಕಿರಿಯ ವಿಭಾಗ (1-4) ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ -ಸುಕ್ಷಿತ್ ಎಸ್. 4ನೇ ಸ.ಹಿ.ಪ್ರಾ.ಶಾಲೆ ಕಾಣಿಯೂರು, ದ್ವಿತೀಯ-ಶೋನಿಶ್ ಬಿ. 4ನೇ ಶ್ರೀ ರಾ.ಸಂ ಹಿ ಪ್ರಾ ಶಾಲೆ ರಾಮಕುಂಜ. ಹಿರಿಯ ವಿಭಾಗ ಪ್ರಬಂಧ ಸ್ಪರ್ಧೆ (5-7) ಪ್ರಥಮ- ಇಂಚರ ಡಿ.ಎನ್. 7ನೇ ಸ.ಹಿ.ಪ್ರಾ ಶಾಲೆ ಕಾಣಿಯೂರು, ದ್ವಿತೀಯ-ಯಶ್ವಿನಿ ಎಂ.7ನೇ ಶ್ರೀ ರಾ.ಸಂ ಹಿ ಪ್ರಾ ಶಾಲೆ ರಾಮಕುಂಜ, ತೃತೀಯ-ಮಾನ್ವಿ ಆರ್. ರೈ 6ನೇ ಶ್ರೀ ರಾಮಕುಂಜೇಶ್ವರ ವಿದ್ಯಾಲಯ (ಸಿಬಿಎಸ್‌ಇ). ಹಿರಿಯ ವಿಭಾಗ ಕವನ ಸ್ಪರ್ಧೆ (5-7)ಯಲ್ಲಿ ಪ್ರಥಮ-ಸಾಯಿಚರಿತ್ 6ನೇ ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆ ನೂಜಿಬಾಳ್ತಿಲ, ದ್ವಿತೀಯ-ಆರಾಧ್ಯ ಆರ್.ಕೆ.7ನೇ ಶ್ರೀ ರಾ.ಆಂ.ಮಾ. ಶಾಲೆ ರಾಮಕುಂಜ, ತೃತೀಯ-ವೀಕ್ಷಾ ಆರ್. 5ನೇ ಶ್ರೀ ರಾ.ಆಂ.ಮಾ. ಶಾಲೆ ರಾಮಕುಂಜ, ಹೃಷಿಕ್ ಓ.ಆರ್ 6ನೇ ಶ್ರೀ ರಾ.ಆಂ.ಮಾ. ಶಾಲೆ ರಾಮಕುಂಜ
ಪ್ರೌಢ ವಿಭಾಗ ಪ್ರಬಂಧ ಸ್ಪರ್ಧೆ (8-10)ಯಲ್ಲಿ ಪ್ರಥಮ- ತನ್ವಿ 10ನೇ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕಡಬ, ದ್ವಿತೀಯ- ಜೀವನ್ ಬಿ 10ನೇ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕಡಬ, ತೃತೀಯ-ಕುಶ್ಮಿತಾ 10ನೇ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕಡಬ ವಿಜೇತರಾಗಿದ್ದಾರೆ.
ಪ್ರೌಢ ವಿಭಾಗ ಕವನ ಸ್ಪರ್ಧೆ (8-10)ಯಲ್ಲಿ ಪ್ರಥಮ-ಜೀವಿಕ ಹೆಚ್.ಸಿ. 10ನೇ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜ, ದ್ವಿತೀಯ-ತನುಶ್ರೀ 10ನೇ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜ, ತೃತೀಯ- ಸಿಂಚನ ಕೆ. 9ನೇ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಕಾಣಿಯೂರು , ಪದವಿ ಪೂರ್ವ ವಿಭಾಗ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ-ವರ್ಷಿಣಿ ಪ್ರಥಮ ಪಿಯುಸಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜ, ಪದವಿ ಪೂರ್ವ ವಿಭಾಗ ಕವನ ಸ್ಪರ್ಧೆಯಲ್ಲಿ ಪ್ರಥಮ- ವರ್ಷಿಣಿ ಪ್ರಥಮ ಪಿಯುಸಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜ, ದ್ವಿತೀಯ- ಪ್ರಜ್ಞಾ ಕೆ ಪ್ರಥಮ ಪಿಯುಸಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜ ವಿಜೇತರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.















