ನಿಲಿಷ್ಕಾ ಕಲ್ಪನೆಯ ಚಿತ್ರಕ್ಕೆ 25 ಸಾವಿರ ರೂಗಳ ನಗದು ಬಹುಮಾನ –  ರೋಹನ್ ಕಾರ್ಪೊರೇಷನ್ ಫ್ರೀಡಂ ಪ್ಯಾಲೆಟ್ ಚಿತ್ರಕಲಾ ಸ್ಪರ್ಧೆ

0

ಪುತ್ತೂರು : ರೋಹನ್ ಕಾರ್ಪೊರೇಷನ್ ಮಂಗಳೂರು ಇದರ ವತಿಯಿಂದ” ಫಿಕ್ಸೆನ್ಸಿಲ್” ಚಿತ್ರಕಲಾ ಶಾಲೆ ಮಂಗಳೂರು ಇದರ ಸಹಯೋಗದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ” ನನ್ನ ಕಣ್ಣಲ್ಲಿ ಭಾರತ” ಎಂಬ ಧ್ಯೇಯವಾಕ್ಯದಡಿ ನಡೆದ” ಫ್ರೀಡಂ ಪ್ಯಾಲೇಟ್ “ ಚಿತ್ರಕಲಾ ಸ್ಪರ್ಧೆಯಲ್ಲಿ ಪುತ್ತೂರಿನ ಯುವ ಚಿತ್ರ ಕಲಾವಿದೆ ನಿಲಿಷ್ಕಾ ಕಲ್ಪನೆ ಅವರು “ಕರಾವಳಿ ಸ್ವಾತಂತ್ರ್ಯ ಸಂಗ್ರಾಮದ” ಬಗ್ಗೆ ರಚಿಸಿದ ಚಿತ್ರಕ್ಕೆ ಪ್ರಥಮ ಸ್ಥಾನದೊಂದಿಗೆ 25,000 ಗಳ ನಗದು ಬಹುಮಾನ ಲಭಿಸಿದೆ.

 ಭಾರತದ ಬೇರೆ ಬೇರೆ ಕಡೆಯಿಂದ ಬಂದ ಸರಿ ಸುಮಾರು 2800 ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ಮೊದಲ ಸುತ್ತಿನಲ್ಲಿ 300 ಚಿತ್ರಗಳನ್ನು ಆಯ್ಕೆ ಮಾಡಿ ಅದರಲ್ಲಿ ಮತ್ತೆ ಎರಡನೇ ಸುತ್ತಿನಲ್ಲಿ 60 ಚಿತ್ರಗಳನ್ನು ಆಯ್ಕೆ ಮಾಡಿ ಆ 60 ಅಭ್ಯರ್ಥಿಗಳಿಗೆ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧ ನಡೆಸಲಾಗಿತ್ತು.

 ಈ ಸ್ಪರ್ಧೆಯಲ್ಲಿ ನಿಲಿಷ್ಕಾ ಕಲ್ಪನೆಯ ಚಿತ್ರ ಮೊದಲ ಸ್ಥಾನಕ್ಕೆ ಆಯ್ಕೆಯಾಗಿತ್ತು. ಮಂಗಳೂರಿನ ರೋಹನ್ ಸ್ಕ್ವಯರ್ ನಲ್ಲಿ ನಡೆದ 80ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 25000 ರೂಗಳ ಚೆಕ್ಕಿನೊಂದಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.

 ಪುತ್ತೂರು ಸಿವಿಲ್ ಇಂಜಿನಿಯರ್ ದಿನೇಶ್ ಹಾಗೂ ಸಂಜಯನಗರ  ಶಾಲಾ ಶಿಕ್ಷಕಿ ಸ್ಮಿತಾಶ್ರೀ ಕೊಕ್ಕಡ ಇವರ ಪುತ್ರಿಯಾಗಿರುವ ನಿಲಿಷ್ಕಾ ಕಲ್ಪನೆ ಇವರು ಪ್ರಸ್ತುತ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪುತ್ತೂರಿನ ತತ್ವ ಸ್ಕೂಲ್ ಆಫ್ ಆರ್ಟ್ಸ್ ಇದರ ಸಂಚಾಲಕರಾದ ಚಿತ್ರಕಲಾ ಶಿಕ್ಷಕ ಟಿಲಾಕ್ಷ ಹಾಗೂ ಚಿತ್ರಕಲಾ ಶಿಕ್ಷಕಿ ರಶ್ಮಿ ಇವರ ಶಿಷ್ಯಯಾಗಿರುತ್ತಾಳೆ.

LEAVE A REPLY

Please enter your comment!
Please enter your name here