







ಪುತ್ತೂರು: ವಾಣಿಜ್ಯ ಸಂಕೀರ್ಣ, ರೆಸಾರ್ಟ್, ಮನೆ ಮೊದಲಾದ ಕಟ್ಟಡಗಳ ನಿರ್ಮಾಣ ಹಂತದಲ್ಲಿ ಅತ್ಯಗತ್ಯವಾಗಿರುವ ವಯರಿಂಗ್, ಪ್ಲಂಬಿಂಗ್ ಸೇರಿದಂತೆ ವಿವಿಧ ಕಾಮಗಾರಿಗಳ ಕರಡು ರಚನೆಯನ್ನು ನೈಜ ರೀತಿಯಲ್ಲಿ ಹಾಗೂ ಕ್ಲಪ್ತ ಸಮಯದಲ್ಲಿ ಒದಗಿಸುವ ಎಂಹೆಚ್‌ಒ ಪವರ್ ಸೊಲ್ಯೂಷನ್ಸ್ ಸಂಸ್ಥೆಯು ಆ.27ರಂದು ಬನ್ನೂರಿನ ಮೆಸ್ಕಾಂ ಉಪವಿಭಾಗ ಕಚೇರಿ ಮುಂಭಾಗದ ಹರ್ಷಾದ್ ಸಂಕೀರ್ಣದ ಮೊದಲ ಮಹಡಿಯಲ್ಲಿ ಶುಭಾರಂಭಗೊಂಡಿತು.



ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಪ್ರಶಾಂತ್ ಅವರು ಸಂಸ್ಥೆಯನ್ನು ಉದ್ಘಾಟಿಸಿದರು. ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಅಶೋಕ್ ಪ್ರಶಾಂತ್ ಹಾಗೂ ಬನ್ನೂರಿನ ಶ್ರೀ ಗಣೇಶ್ ಎಂಟರ್‌ಪ್ರೈಸಸ್‌ನ ಮಾಲಕ ರಮೇಶ್ ಬಂಡಾರಿ ಉಪಸ್ಥಿತರಿದ್ದು ಶುಭಹಾರೈಸಿದರು.



ಎಂಹೆಚ್‌ಒ ಪವರ್ ಸೊಲ್ಯೂಷನ್ಸ್ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು, ಮನೆ, ವಾಣಿಜ್ಯ ಸಂಕೀರ್ಣ, ರೆಸಾರ್ಟ್ ಮೊದಲಾದ ಕಟ್ಟಡಗಳಿಗೆ ವಯರಿಂಗ್ ಮತ್ತು ಪ್ಲಂಬಿಂಗ್‌ನ ಕರಡು ರಚನೆಯನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುತ್ತದೆ. ಅಲ್ಲದೆ, ಪ್ರೊಫೆಷನಲ್ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಸೇವೆಗಳು, ಲಿಫ್ಟ್, ಸೋಲಾರ್ ಸೇರಿದಂತೆ ವಿವಿಧ ಸೇವೆಗಳಿಗೆ ಅಗತ್ಯವಿರುವ ಲೈಸೆನ್ಸ್‌ಗಳನ್ನು ಮಾಡಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 90488 84404, 9995068134 ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕ ರಾಜೇಶ್ ಕೆ. ತಿಳಿಸಿದ್ದಾರೆ.
ಲಭ್ಯವಿರುವ ಸೇವೆಗಳು
ಮೆಕನಿಕಲ್, ಎಲೆಕ್ಟ್ರಿಕಲ್, ಪ್ಲಂಮ್ಮಿಂಗ್ ಡ್ರಾಫ್ಟಿಂಗ್
ಮೆಕನಿಕಲ್, ಎಲೆಕ್ಟ್ರಿಕಲ್, ಪ್ಲಂಮ್ಮಿಂಗ್ ಡಿಸೈನಿಂಗ್
ಸ್ಕೀಂ ಅಪ್ರೂವಲ್
ಡಿಜಿ/ಸೋಲಾರ್ ಪಿವಿ ಅಪ್ರೂವಲ್ ಮತ್ತು ಇತ್ಯಾದಿ










