






ಪುತ್ತೂರು: ಸರ್ವೆ ಶ್ರೀಗೌರಿ ಮಹಿಳಾ ಮಂಡಲದ ವತಿಯಿಂದ ಐದನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಶ್ರೀ ಗುರುರಾಘವೇಂದ್ರ ಮಠ ಕಲ್ಲಮದಲ್ಲಿ ಶ್ರದ್ಧಾ ಭಕ್ತಿಯಿಂದ ಸುಧೀಂದ್ರ ಅಡಿಗ ಅವರ ಪೌರೋಹಿತ್ಯದಲ್ಲಿ ನಡೆಯಿತು.
ಕಲ್ಲಮ ಶ್ರೀ ಗುರುರಾಘವೇಂದ್ರ ಮಠ ಇದರ ವ್ಯವಸ್ಥಾಪಕರಾದ ಡಾ ಕಲ್ಲಮ ಸೀತಾರಾಮ್ ಭಟ್ ಅವರು ದೀಪ ಪ್ರಜ್ವಲಿಸುವ ಮೂಲಕ ಭಜನಾ ಸಂಕೀರ್ತನೆಗೆ ಚಾಲನೆ ನೀಡಿದರು.



ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ಗೀತ ಪಾರಾಯಣ ಮತ್ತು ಭಜನಾ ಸಂಕೀರ್ತನೆಯನ್ನು ನವಚೇತನ ಭಜನಾ ತಂಡ, ಶ್ರೀರಾಮರ್ಪಣಾ ಭಜನಾ ತಂಡ ಮಜಲುಮಾರು ಮತ್ತು ಶ್ರೀಗೌರಿ ಮಹಿಳಾ ಮಂಡಲದ ಸದಸ್ಯರು ನಡೆಸಿಕೊಟ್ಟರು.
ಸುಮಾರು 300 ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಶ್ರೀವರಮಹಾಲಕ್ಷ್ಮಿ ಪೂಜೆಯನ್ನು ಮಾಡಿಸಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾದರು.
ಮಹಿಳಾ ಮಂಡಲದ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ ಸಾಧಕ ವಿದ್ಯಾರ್ಥಿಗಳಾದ ತನ್ವಿ ಎಸ್ ಡಿ ಮತ್ತು ಪುಣ್ಯಶ್ರೀಯನ್ನು ಅಭಿನಂದಿಸಲಾಯಿತು. ಡಾ ಕಲ್ಲಮ ಸೀತಾರಾಮ್ ಭಟ್, ಶ್ರೀಮತಿ ಅನುರಾಧ ಸೀತಾರಾಮ್ ಭಟ್, ಜಿ ಕೆ ಪ್ರಸನ್ನ ಭಟ್ ಕಲ್ಲಮ, ದೇವಿಕ ಪ್ರಸನ್ನ ಭಟ್, ಜಯರಾಜ್ ಸುವರ್ಣ, ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಕಾರ್ಯಕ್ರಮ ಯಶಸ್ವಿಯಾಗಲು ಪೂರ್ಣ ಪ್ರಮಾಣದ ಸಹಕಾರವನ್ನು ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಗೌರಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ರತ್ನಾವತಿ ವಸಂತ ಎಸ್ ಡಿ ಸರ್ವೆದೋಳಗುತ್ತು, ಗೌರವ ಸಲಹೆಗಾರರಾದ ವಿಜಯಲಕ್ಷ್ಮಿ ಶಂಕರನಾರಾಯಣ ಭಟ್ ಸರ್ವೆ, ನಿಕಟಪೂರ್ವ ಅಧ್ಯಕ್ಷೆ ಮೋಹಿನಿ ರಮೇಶ್ ಗೌಡ, ಅಧ್ಯಕ್ಷೆ ಕುಶಲ ನಾಗೇಶ್ ಪಟ್ಟೆಮಜಲು, ಮಹಿಳಾ ಮಂಡಲದ ಸರ್ವ ಸದಸ್ಯರು, ಊರ ಪರವೂರ ಮಹನೀಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.













