ಕೇರಳದ ಮಾದರಿಯಲ್ಲಿ ವಿದ್ಯಾರ್ಥಿಗಳು ಸರಕಾರಿ ಶಾಲೆಯಲ್ಲೇ ಓದುವಂತೆ ಪ್ರೇರೇಪಿಸಬೇಕು- ಎಸ್.ಎಫ್.ಐ ಆಗ್ರಹ

0

ಪುತ್ತೂರು: ಸರಕಾರಿ ಶಾಲೆಗಳ ಅಭಿವೃದ್ದಿಗೆ ಎಡಿಬಿ ಬ್ಯಾಂಕ್ ನೆರವು ನೀಡಲು ಮುಂದಾಗಿದ್ದು, ಈ ಬಗ್ಗೆ ರಾಜ್ಯ ಸರಕಾರ ಎಡಿಬಿ ಬ್ಯಾಂಕು ಜೊತೆ ಒಪ್ಪಂದ ಮಾಡಿರುವುದು ಅತ್ಯಂತ ಸ್ವಾಗತಾರ್ಹ ನಿರ್ಧಾರ ಎಂದು ಹೇಳಿರುವ ಎಸ್.ಎಪ್.ಐ. ಅದರ ಜೊತೆಗೆ ಕೇರಳದ ಮಾದರಿಯಲ್ಲಿ ವಿದ್ಯಾರ್ಥಿಗಳು ಸರಕಾರಿ ಶಾಲೆಯಲ್ಲೇ ಓದಿವಂತೆ ಪ್ರೇರೇಪಿಸುವ ಕೆಲಸವೂ ನಡೆಯಬೇಕು ಎಂದು ಎಸ್.ಎಫ್.ಐ. ರಾಜ್ಯ ಜೊತೆ ಕಾರ್ಯದರ್ಶಿ ವಿನುಶರಮಣ ಬೋಳೋಡಿ ಅವರು ಪುತ್ತೂರಲ್ಲಿ ತಿಳಿಸಿದರು.


ಕರ್ನಾಟಕ ರಾಜ್ಯ ಸರಕಾರವು ಮುಂದಿನ 4 ವರ್ಷಗಳಲ್ಲಿ ರೂ.2,500 ಕೋಟಿ ವೆಚ್ಚದಲ್ಲಿ ಸರಕಾರಿ ಕೆಪಿ ಶಾಲೆಗಳ ಅಭಿವೃದ್ದಿ ಪಡಿಸುವುದಾಗಿ ಘೋಷಿಸಿದ್ದು, ಇದರ ಭಾಗವಾಗಿ ಎಡಿಬಿ ಬ್ಯಾಂಕು ರೂ. 1,750 ಕೋಟಿ ರೂ ನೆರವು ನೀಡಲು ಮುಂದೆ ಬಂದಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಆದರೆ ಸರಕಾರಿ ಶಾಲೆಗಳನ್ನು ಕೇರಳ ಮಾದರಿಯಲ್ಲಿ ಅಭಿವೃದ್ದಿ ಪಡಿಸುವ ಮನಸ್ತಿತಿ ಕೂಡಾ ಸರಕಾರಕ್ಕೆ ಇರಬೇಕು ಎಂದರು. ನಮ್ಮ ಶಿಕ್ಷಣ ಮಂತ್ರಿಗಳ ನಾಯಕತ್ವದಲ್ಲಿ ಇಲ್ಲಿಯ ಕೆಲವು ಶಾಸಕರುಗಳ ಒಂದು ನಿಯೋಗ ಕೇರಳಕ್ಕೆ ಹೋಗಿ ಅಧ್ಯಯನ ನಡೆಸಿ ಬರುವುದು ಸೂಕ್ತವಾಗಿದೆ ಎಂದೂ ಅವರು ಹೇಳಿದರು. ನಮ್ಮ ಎಲ್ಲಾ ಶಾಸಕರೂ, ಮಂತ್ರಿಗಳೂ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಮಕ್ಕಳು, ಸರಕಾರಿ ಉದ್ಯೋಗಸ್ಥರ ಮಕ್ಕಳು ಸರಕಾರಿ ಶಾಲೆಗೆ ಹೋಗಬೇಕೆಂದು ಕಡ್ಡಾಯಗೊಳಿಸಬೇಕು ಎಂದ ಅವರು ಶಿಕ್ಷಣ ವ್ಯಾಪಾರಿಕರಣ ಆಗುವುದನ್ನು ತಡೆಯಲು ಸರಕಾರ ಬದ್ದವಾಗಿ ಸರಕಾರಿ ಶಾಲೆಗಳ ಅಭಿವೃದ್ದಿಗೆ ಕಟ್ಟಡಗಳ ಸುವ್ಯವಸ್ಥೆಗಳಿಗೆ, ಖಾಲಿ ಇರುವ ಲಕ್ಷಾಂತರ ಅದ್ಯಾಪಕರ ಹುದ್ದೆಗಳ ನೇಮಕಾತಿಗೆ, ಇತರ ವೈಜ್ಞಾನಿಕರಣ ಬೆಳವಣಿಗೆಗೆ ಸರಕಾರ ಗಮನ ನೀಡಿ ಸರಕಾರಿ ಶಾಲೆಗಳ ಉಳಿವಿಗೆ ಮತ್ತು ಬೆಳವಣಿಗೆಗೆ ಬದ್ದತೆಯನ್ನು ತೋರಿಸಬೇಕು ಎಂದವರು ಆಗ್ರಹಿಸಿದರು.

LEAVE A REPLY

Please enter your comment!
Please enter your name here