






ಉಪ್ಪಿನಂಗಡಿ: ಸಹೋದರತೆಯ ಸಂಬಂಧವನ್ನು ಬೆಸೆಯುವ ರಕ್ಷೆ ಸಮಾಜದ ಸಾಮರಸ್ಯಕ್ಕೂ ಪ್ರೇರಣೆ ನೀಡುವ ಶಕ್ತಿಯನ್ನು ಹೊಂದಿದೆ ಎಂದು ಚಿಂತಕಿ ಗೀತಾಲಕ್ಷ್ಮೀ ತಾಳ್ತಜೆ ತಿಳಿಸಿದರು.
ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ರಕ್ಷಾಬಂಧನ ಉತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.


ಶಿಶುಮಂದಿರದ ಅಧ್ಯಕ್ಷ ಹರಿರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಶು ಮಂದಿರದ ಕಾರ್ಯದರ್ಶಿ ಸುಜಾತಕೃಷ್ಣ ಆಚಾರ್ಯ, ಉಪಾಧ್ಯಕ್ಷ ಕಂಗ್ವೆ ವಿಶ್ವನಾಥ ಶೆಟ್ಟಿ, ಪೋಷಕ ಸಂಘದ ಕಾರ್ಯದರ್ಶಿ ಅಶ್ವಿತಾ ಧನಂಜಯ್ ಉಪಸ್ಥಿತರಿದ್ದರು.



ಶಿಶು ಮಂದಿರದ ಪುಟಾಣಿ ಮಕ್ಕಳು ಪರಸ್ಪರ ರಾಖಿಯನ್ನು ಕಟ್ಟಿಕೊಂಡು ಸಂಭ್ರಮಿಸಿದರು.










