






ಪುತ್ತೂರು: ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಯುವ ಕವಯತ್ರಿಮೋಹಿತಾ ಹೊಸ್ಮಠರವರ ಚೊಚ್ಚಲ ಕವನ ಸಂಕಲನ ಹಿತ ಸ್ವಪ್ನ ವನ್ನು ಸಮ್ಮೇಳನಾಧ್ಯಕ್ಷರಾದ ಶಕುಂತಲಾ ಟಿ ಶೆಟ್ಟಿ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಅಧ್ಯಕ್ಷ ಸೇಸಪ್ಪ ರೈ,ಇತಿಹಾಸಕಾರರು ಮತ್ತು ಸಂಶೋಧನಕಾರರಾದ ಡಾ. ತುಕಾರಾಮ ಪೂಜಾರಿ, ಕವಯತ್ರಿ ಮೋಹಿತಾ ಹೊಸ್ಮಠ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಕೃತಿಗೆ ಮುನ್ನುಡಿ ಬರೆದಿದ್ದಾರೆ.













