






ಪುತ್ತೂರು: ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಯುವ ಸಾಹಿತಿ ಸುಪ್ರೀತಾ ಚರಣ್ ಪಾಲಪ್ಪೆಯವರ 5ನೇ ಕೃತಿ ಯಥಾರ್ಥ ಕಥಾ ಸಂಕಲನವನ್ನು ಸಮ್ಮೇಳನಾಧ್ಯಕ್ಷರಾದ ಶಕುಂತಲಾ ಟಿ ಶೆಟ್ಟಿ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಅಧ್ಯಕ್ಷ ಸೇಸಪ್ಪ ರೈ,ಇತಿಹಾಸಕಾರರು ಮತ್ತು ಸಂಶೋಧನಕಾರರಾದ ಡಾ. ತುಕಾರಾಮ ಪೂಜಾರಿ, ಕವಯತ್ರಿ, ಲೇಖಕಿ ಸುಪ್ರೀತಾ ಚರಣ್ ಪಾಲಪ್ಪೆ ಮತ್ತಿತರರು ಉಪಸ್ಥಿತರಿದ್ದರು. ಡಾ. ವಾದಿರಾಜ ಕಲ್ಲೂರಾಯ ಕೃತಿಗೆ ಮುನ್ನುಡಿ ಹಾಗು ಲೇಖಕಿ ಅಶ್ವಿಜ ಶ್ರೀಧರ್ ಬೆಳ್ತಂಗಡಿ ಬೆನ್ನುಡಿ ಬರೆದಿದ್ದಾರೆ.













