ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

0

  ನಿಡ್ಪಳ್ಳಿ; ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆ.29 ರಂದು ರಂದು  ಆಚರಿಸಲಾಯಿತು. 

ಮುಖ್ಯ ಗುರು ವಿಜಯಕುಮಾರ್. ಎಂ  ಹಾಕಿ ಸ್ಟಿಕ್ ನಿಂದ ಬಾಲನ್ನು ಹಿಟ್ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ,ವಿದ್ಯಾರ್ಥಿಗಳು ಸತತ ಪರಿಶ್ರಮ ಹಾಗೂ  ನಿರಂತರ ಅಭ್ಯಾಸ ಮಾಡಿದರೆ ಕ್ರೀಡೆಯಲ್ಲಿ ಯಶಸ್ಸು ಸಾಧ್ಯ ಎಂದು ತಿಳಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ  ಚಂದ್ರಕಲಾ ಕೆ.ವಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಧ್ಯಾನ್ ಚಾಂದ್ ಕ್ರೀಡೆಯಲ್ಲಿ ಬೆಳೆದು ಬಂದ ರೀತಿ ಹಾಗೂ ಆಡಿದ ಪಂದ್ಯಾಟಗಳು, ಪ್ರಶಸ್ತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಅವರಲ್ಲಿ ಇದ್ದ ಗುರಿ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಎಂಟನೇ ತರಗತಿಯ ಮೋಹಿತ ಮತ್ತು ದೀಕ್ಷಾ ಪ್ರಾರ್ಥಿಸಿ, ನಿಕ್ಷಿತ್ ಸ್ವಾಗತಿಸಿದರು. ಮೇಜರ್ ಧ್ಯಾನ್ ಚಂದ್ ಅವರ ಬಗ್ಗೆ ವಿದ್ಯಾರ್ಥಿಗಳಾದ ಅಶ್ವಿತ್ ಮತ್ತು ಷಣ್ಮುಖ ಭಾಷಣ ಮಾಡಿದರು. ಕೀರ್ತಿ ಕಾರ್ಯಕ್ರಮ ನಿರೂಪಿಸಿ ಗುರು ಕಿರಣ ವಂದಿಸಿದರು.

ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ರಸಪ್ರಶ್ನೆಯನ್ನು ಏರ್ಪಡಿಸಲಾಯಿತು ಮತ್ತು ಮನರಂಜನಾ ಕ್ರೀಡೆ  ನಡೆಸಲಾಯಿತು. ಎಲ್ಲಾ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here