






ಮಂಗಳೂರು, ಆ.31: ಹಿಂದೂ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಪುತ್ತೂರು ಚಲೋ ಕಾರ್ಯಕ್ರಮ ಆಯೋಜಿಸಿರುವವರಿಗೆ ನನ್ನನ್ನು ಆಹ್ವಾನಿಸುವ ಯಾವುದೇ ನೈತಿಕತೆ ಇಲ್ಲ ಎಂದು ನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.


ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಕತ್ತಿದ್ದರೆ ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನಿಂದ ಗರ್ಭಿಣಿಯಾಗಿ ಮಗುವಿನ ತಾಯಿಯಾಗಿರುವ ಯುವತಿಗೆ ಆ ಯುವಕನ ಜೊತೆ ಮದುವೆ ಮಾಡಿಸಿ ಎಂದರು.



ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್ ನಿಂದ ವಂಚನೆಗೊಳಗಾದ ಯುವತಿ ಹಾಗೂ ಆಕೆಯ ಕುಟುಂಬ ಪುತ್ತೂರಿನ ಪ್ರಮುಖ ನಾಯಕರ ನಾಯಕರ ಮನೆಮನೆಗೆ ಅಲೆದಿದೆ. ಆದರೆ ಆ ಸಂದರ್ಭ ಯಾರೊಬ್ಬರೂ ಬೆಂಬಲ ನೀಡಿಲ್ಲ. ಇದೀಗ ಕೋಮು ಗಲಭೆ ಎಬ್ಬಿಸಿ ರಾಜಕೀಯಕ್ಕಾಗಿ ಸಣ್ಣ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಯಾವುದೇ ಹೆಣ್ಣಿಗೆ ಅನ್ಯಾಯವಾದರೆ ನಾನು ಅವರ ಪರವಾಗಿ ನಿಲ್ಲುತ್ತೇನೆ.
ಈ ಪುತ್ತೂರು ಚಲೋ ಕಾರ್ಯಕ್ರಮದ ಬಳಿಕ ಪ್ರತಿಭಟನಾಕಾರರು ಜಗನ್ನಿವಾಸ್ ಅವರ ಮನೆಗೆ ಬರುವುದಾದರೆ ನಾನು ಪ್ರತಿಭಟನೆಗೆ ಬೆಂಬಲಿಸುತ್ತೇನೆ.ಪೂಜಾಳಿಗೆ ಇನ್ನೂ ನ್ಯಾಯ ಸಿಗಲಿಲ್ಲ ದುಡ್ಡು ಸಿಗುತ್ತಿದೆ ತಿಂಗಳು ತಿಂಗಳು ಕೋರ್ಟ್ ಮುಖಾಂತರ ಕಳೆದ ತಿಂಗಳಿನಿಂದ ಹಣ ಸಿಗುತ್ತಿದೆ.ಆದರೆ ಇಲ್ಲಿ ದುಡ್ಡು ಮುಖ್ಯವಲ್ಲ ಅವಳ ಲೈಫ್ ಹಾಳಾಗಿದೆ ಅವಳ ಮಗುವಿನ ಲೈಫ್ ಹಾಳಾಗಿದೆ.ಹಾಗಾಗಿ ಅವಳಿಗೆ ಮದುವೆ ಆಗಬೇಕು. ಅದರ ಜವಬ್ದಾರಿ ಈ ಪ್ರತಿಭಟನೆ ಯಾರು ಮಾಡುತ್ತಿದ್ದಾರೆ ಅವರು ಈ ಕೇಸ್ ಸಾಲ್ವ್ ಮಾಡದೆ ಇವರಿಗೆ ಯಾವುದೇ ರೀತಿಯ ಮಾತಾಡ್ಲಿಕ್ಕೆ ನೈತಿಕತೆ ಇಲ್ಲ. ಈ ಪ್ರೆಸ್ ನಲ್ಲಿ ಕೂತು ಯಾರು ಮಾತನಾಡುತ್ತಾರೆ ಅಥವಾ ದೊಡ್ಡ ದೊಡ್ಡ ಭಾಷಣ ಬಿಗಿತಾರೆ ಪೂಜಾಳಿಗೆ ಅವಳು ಒಂದು ಹಿಂದೂ ಹೆಣ್ಣುಮಗಳಾಗಿ ಅವಳಿಗೆ ನ್ಯಾಯ ಸಿಗದೆ ಪುತ್ತೂರಿನವರು ಯಾರೂ ಮಾತನಾಡುವಾಗಿಲ್ಲ ಎಂದರು. ಅವರಿಗೆ ತಾಕತ್ತಿದ್ದರೆ ಕೃಷ್ಣ ಜೇ ರಾವ್ ಮದುವೆ ಮಾಡಿಸಿ ಎಂದರು.
ದ.ಕ. ಜಿಲ್ಲಾಧಿಕಾರಿಯ ಸರ್ಕಾರಿ ನಿವಾಸದಲ್ಲಿ ಅವರ ಪತ್ನಿಯ ಬೋರ್ಡ್ ಹಾಕಿರುವ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಸರ್ಕಾರಿ ನಿವಾಸದಲ್ಲಿ ಆ ದರ್ಜೆಗೆ ಸಂಬಂಧಪಡದವರ ಹೆಸರು ಹಾಕುವ ಅಧಿಕಾರ ಇಲ್ಲ. ಜಿಲ್ಲಾಧಿಕಾರಿಗೆ ಮಾತ್ರ ಅವಕಾಶವಿದ್ದು, ಪತ್ನಿಯ ಹೆಸರು ಹಾಕುವಂತಿಲ್ಲ. ಜಿಲ್ಲಾಧಿಕಾರಿಗೆ ಕಾನೂನಿನ ಅರಿವು ಇದ್ದು ತಪ್ಪು ಸರಿಪಡಿಸಬಹುದು ಎಂಬ ಅನಿಸಿಕೆ ಇತ್ತು, ಆದರೆ ಉದ್ಧಟತನ ತೋರಿಸಿದ್ದಾರೆ. ಒಂದು ವಾರ ಕಾದು ಕಾನೂನು ಪ್ರಕಾರ ಬೋರ್ಡ್ ತೆಗಿಸಲು ಕ್ರಮ ವಹಿಸಲಾಗುವುದು. ಈಗಾಗಲೇ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಇ-ಮೇಲ್ ಮಾಡಿರುವುದಾಗಿ ತಿಳಿಸಿದರು.










