102ನೇ ನೆಕ್ಕಿಲಾಡಿ ಒಕ್ಕೂಟದ ತ್ರೈಮಾಸಿಕ ಸಭೆ; ನೂತನ ಪದಾಧಿಕಾರಿಗಳ ಆಯ್ಕೆ

0

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಕಡಬ, ಐತ್ತೂರು ವಲಯದ 102ನೇ ನೆಕ್ಕಿಲಾಡಿ ಒಕ್ಕೂಟದ ತ್ರೈಮಾಸಿಕ ಸಭೆಯು ಮರ್ದಾಳ ಅಯ್ಯಪ್ಪ ಭಜನಾ ಮಂದಿರದಲ್ಲಿ ಒಕ್ಕೂಟದ ಅಧ್ಯಕ್ಷ ವಿನಯ ಜಿ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಮೇಲ್ವಿಚಾರಕ ಸೋಮೇಶ್, ರಿಕವರಿ ಮೇಲ್ವಿಚಾರಕಿ ವಿದ್ಯಾ ಹಾಗೂ ಆಡಿಟರ್ ಅಮಿತಾ ಉಪಸ್ಥಿತರಿದ್ದರು. ಸಭೆಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಂಕರ್, ಉಪಾಧ್ಯಕ್ಷರಾಗಿ ಕುಮಾರವೇಲು, ಕಾರ್ಯದರ್ಶಿಯಾಗಿ ಪುಷ್ಪಾವತಿ, ಜೊತೆ ಕಾರ್ಯದರ್ಶಿಯಾಗಿ ಶ್ರೀದೇವಿ ಹಾಗೂ ಕೋಶಾಧಿಕಾರಿಯಾಗಿ ಸೀತಾರಾಮ ರೈ ಆಯ್ಕೆಯಾದರು.


ದಾಖಲಾತಿ ಸಮಿತಿ ಸದಸ್ಯರಾಗಿ ನಳಿನಿ, ಪ್ರಶಾಂತ, ಭಾಗೀರಥಿ, ಅಬೀಬಾ ಭಾನು ಹಾಗೂ ಸತ್ಯರಾಜ್ ಅವರನ್ನು ಆಯ್ಕೆ ಮಾಡಲಾಯಿತು. ಉಪಸಮಿತಿ ಸದಸ್ಯರಾಗಿ ಭಾಗೀರಥಿ, ಭವಾನಿಶಂಕರ, ವಿನಯ ಜಿ., ಭವ್ಯ, ಆನಂದ ಹಾಗೂ ಉಷಾ ಆಯ್ಕೆಯಾದರು. ಒಕ್ಕೂಟದ ಕಾರ್ಯದರ್ಶಿ ಹಾಗೂ ಸೇವಾ ಪ್ರತಿನಿಧಿ ಜ್ಞಾನಸೇಲ್ವಿ ಅವರು ಸ್ವಾಗತಿಸಿ,ಒಕ್ಕೂಟದ ಕಾರ್ಯದರ್ಶಿ ವನಸುಂದರಿ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here