







ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಹಿಂದೂಪರ ಕಾರ್ಯಕರ್ತರು; ಐದು ಬೇಡಿಕೆಗಳ ಈಡೇರಿಕೆಗೆ ಆಗ್ರಹ


ಹಿಂದೂ ಸಮಾಜದ ಭಾವನೆ ಕೆರಳಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ’- ಶ್ರೀಕಾಂತ್ ಶೆಟ್ಟಿ



ನ್ಯಾಯ ಧಕ್ಕಿಸುವ ತನಕ ವಿರಮಿಸುವುದಿಲ್ಲ – ಮೋಹನ್ದಾಸ್ ಕಾಣಿಯೂರು
ನ್ಯಾಯಕ್ಕಾಗಿ ನಮ್ಮ ಹೋರಾಟ – ಡಾ.ಕೃಷ್ಣಪ್ರಸನ್ನ
ಪುತ್ತೂರು: ದರ್ಬೆಯಲ್ಲಿ ಆ.21ರಂದು ನಡೆದ ಘಟನೆಯನ್ನು ಖಂಡಿಸಿ, ಐದು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಜಂಟಿಯಾಗಿ ಆ.31ರಂದು ಹಮ್ಮಿಕೊಂಡ ಪುತ್ತೂರು ಚಲೋ’ ಬೃಹತ್ ಜನಜಾಗೃತಿ ಆಂದೋಲನವು ದರ್ಬೆಯಿಂದ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ತನಕ ಸಹಸ್ರ ಸಂಖ್ಯೆಯ ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಡೆಯಿತು.
ದರ್ಬೆ ನಿರೀಕ್ಷಣಾ ಮಂದಿರದ ಬಳಿ ಹಿಂದು ಜಾಗರಣ ವೇದಿಕೆ ಗೌರವಾಧ್ಯಕ್ಷ ಡಾ. ಎಂ.ಕೆ.ಪ್ರಸಾದ್ ಅವರು ಕೇಸರಿ ಧ್ವಜವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಹಸ್ತಾಂತರ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆಯುಶ್ರೀಲಕ್ಷ್ಮೀವೆಂಟರಮಣ ದೇವಸ್ಥಾನದ ಬಳಿಯಲ್ಲಿ ಸಮಾವೇಶಗೊಂಡು ಅಲ್ಲಿ ಜಾಗೃತಿ ಸಭೆ ನಡೆಸಲಾಯಿತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ಆಂದೋಲನದಲ್ಲಿ ಪಾಲ್ಗೊಂಡರು.

ಮೆರವಣಿಗೆ ಸಾಗುವ ಸಂದರ್ಭ ಪುತ್ತೂರು ನಗರದ ಬಹುತೇಕ ಹಿಂದೂ ವರ್ತಕರು ತಮ್ಮ ಅಂಗಡಿಗಳ ಮುಂದೆ ನಿಂತು ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದರು. ದರ್ಬೆ ಘಟನೆಯಲ್ಲಿ ನ್ಯಾಯ ದೊರಕಿಸುವುದು, ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳ ಮರುಪರಿಶೀಲನೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಸೇರಿದಂತೆ ಐದು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪುತ್ತೂರು ಚಲೋ’ ಆಂದೋಲನ ನಡೆಸಲಾಯಿತು.










