ಕೌಡಿಚ್ಚಾರು: ವರಮಹಾಲಕ್ಷ್ಮೀ ವ್ರತ ಪೂಜೆ,ಅರಿಯಡ್ಕ ಒಕ್ಕೂಟದ ಪದಗ್ರಹಣ

0

ಅರಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪುತ್ತೂರು , ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅರಿಯಡ್ಕ, ಮತ್ತು ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಕೌಡಿಚ್ಚಾರು -ಅರಿಯಡ್ಕ ಇದರ ವತಿಯಿಂದ ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅರಿಯಡ್ಕ ಇದರ ಪದ ಗ್ರಹಣ ಸಮಾರಂಭ‌ ಅ 28 ರಂದು ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ವಾಸುದೇವಾ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

ವರಮಹಾಲಕ್ಷ್ಮೀ ವ್ರತ ಪೂಜೆ:
ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿ ಕೌಡಿಚ್ಚಾರು ಇದರ ನೇತೃತ್ವದಲ್ಲಿ 17 ನೇ ವರ್ಷದ ಪೂಜೆ ಕಾವು ಶಿವಪ್ರಸಾದ ಕಡಮಣ್ಣಾಯರವರ ಪೌರೋಹಿತ್ಯದಲ್ಲಿ ನಡೆಯಿತು.

ಪದ ಗ್ರಹಣ ಸಮಾರಂಭ‌: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪುತ್ತೂರು ಇದರ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅರಿಯಡ್ಕ ಇದರ ಪದಗ್ರಹಣ ಸಮಾರಂಭವನ್ನು ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಹಿಂಗಾರ ಅರಳಿಸಿ, ಯೋಜನೆ ನಡೆದು ಬಂದ ದಾರಿ, ಸಮಾಜಮುಖಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ವೇದಿಕೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ ಕುಂಬ್ರ ಇದರ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಬಿ ಆರ್, ಅರಿಯಡ್ಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಅಧ್ಯಕ್ಷೆ ಸುಧಾ ಆಕಾಯಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಮಾ ಸಮನ್ವಯ ಅಧಿಕಾರಿ ಜನಾರ್ದನ, ಉಪಸ್ಥಿತರಿದ್ದರು. ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.



ಇದೇ ಸಂದರ್ಭದಲ್ಲಿ ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಹಿಂದಿನ ಒಕ್ಕೂಟದ ಪದಾಧಿಕಾರಿಗಳು ವೀಳ್ಯದೆಲೆ ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು.ಅರಿಯಡ್ಕ ಒಕ್ಕೂಟ ಎ ಇದರ ನಿಕಟ ಪೂರ್ವ ಅಧ್ಯಕ್ಷ ದಯಾನಂದ ಗೌಡ ಯೋಜನೆಯಿಂದ ತನಗಾದ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.ನೂತನ ಅಧ್ಯಕ್ಷ ಕುಂಞಿ ರಾಮ ಮಣಿಯಾಣಿ ಮುಂದಿನ ದಿನಗಳಲ್ಲಿ ಒಕ್ಕೂಟ ವನ್ನು ಬಲಪಡಿಸುವ ನಿಟ್ಟಿನಲ್ಲಿ ಸದಸ್ಯರ ಸಹಕಾರವನ್ನು ಯಾಚಿಸಿದರು.

ಅನ್ನದಾನ: ನೂರಾರು ಭಕ್ತಾದಿಗಳು ಅನ್ನ ಪ್ರಸಾದವನ್ನು ಸ್ವೀಕರಿಸಿದರು.ಸಮಿತಿ ಸದಸ್ಯರಾದ ಕಲಾವತಿ ಪೆರಿಗೇರಿ, ಭಾರತಿ ವಸಂತ್ ಕೌಡಿಚ್ಚಾರು, ಶ್ರೀಧರ ಪೂಜಾರಿ ಕುಕ್ಕುತ್ತಡಿ, ಗಣೇಶ್ ದಾಸ್ ಬಪ್ಪುಂಡೇಲು, ಸದಾಶಿವ ಮಣಿಯಾಣಿ ಕುತ್ಯಾಡಿ,ಸತೀಶ್ ಕೊಪ್ಪಳ, ಭಾಗೀರಥಿ ಕುರಿಂಜ, ರಾಧಾಕೃಷ್ಣ ಎರ್ಕ,ನಯನ ಪೆರ್ನುಕು,ನಯನ ಬಳ್ಳಿಕಾನ, ಶೈಲಾ ಡಿ ಪೆರಿಗೇರಿ,ರಕ್ಷಾ ಬೇರ್ನಂತಿ, ಮಮತಾ ಕುತ್ಯಾಡಿ ,ವಾಣಿ ಪಾದೆಲಾಡಿ, ಲಕ್ಷ್ಮೀ ಕುತ್ಯಾಡಿ, ಮೋಹನ ಮಣಿಯಾಣಿ ಕುತ್ಯಾಡಿ, ರತ್ನಾವತಿ ಮಾವಿಲ ಕೊಚ್ಚಿ,ಸುಂದರಿ ಪಾಪೆ ಮಜಲು, ಹೇಮಾವತಿ ಮುಂಡೋಳೆ,ಸೇವಾ ಪ್ರತಿನಿಧಿ ಸುಶ್ಮಿತಾ ಮಣ್ಣಾಪು ಮತ್ತು ವಿ.ಎಲ್.ಇ ನಿಶಾ ಮಾವಿಲಕೊಚ್ಚಿ ,ಸುವಿಧ ಸಹಾಯಕಿ ಶಶಿಕಲಾ ವಿವಿಧ ಕಾರ್ಯಗಳನ್ನು ನಿರ್ವಹಿಸಿದರು.



ಹೇಮಾಲತಾ ಬಳ್ಳಿಕಾನ ಪ್ರಾರ್ಥಿಸಿ, ಪೂರ್ಣಿಮಾ ಬಪ್ಪುಂಡೇಲು ವರದಿ ವಾಚಿಸಿದರು.ಮೇಲ್ವಿಚಾರಕ ಹರೀಶ್ ಸ್ವಾಗತಿಸಿ , ಶಾಂಭವಿ ಕುತ್ಯಾಡಿ ವಂದಿಸಿದರು.ವೇದಾವತಿ ಹೊಸಗದ್ದೆ ನಿರೂಪಿಸಿದರು.

LEAVE A REPLY

Please enter your comment!
Please enter your name here