






ಪುತ್ತೂರು: ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂ ಶೀಟ್‌ನಿಂದ ನಿರ್ಮಿಸಲಾದ ಶೆಡ್‌ನೊಳಗೆ ಸ್ಫೋಟಕ ಸಾಮಾಗ್ರಿಗಳನ್ನು ತಯಾರಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.


ಘಟನೆಯ ವಿವರ:
2019ರ ಡಿಸೆಂಬರ್ 23ರಂದು ಮಧ್ಯಾಹ್ನ 2.30ಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಕ್ತಿವೇಲು ಅವರು ನೆಟ್ಟಣಿಗೆ ಮುಡ್ನೂರು ಗ್ರಾಮದ ಮಡ್ಯಲಮಜಲು ಎಂಬಲ್ಲಿಗೆ ದಾಳಿ ನಡೆಸಿ ಯಾವುದೇ ಪರವಾನಿಗೆ ಇಲ್ಲದೆ ಹಾಗೂ ಯಾವುದೇ ಮುಂಜಾಗರೂಕತೆ ವಹಿಸದೆ ಮಾನವ ಜೀವಕ್ಕೆ ಅಪಾಯವಾಗುವ ಮತ್ತು ಆಸ್ತಿಪಾಸ್ತಿಗೆ ನಷ್ಟ ಉಂಟಾಗುವ ರೀತಿಯಲ್ಲಿ ಪಾಸ್ಟಿಕ್ ಮತ್ತು ಅಲ್ಯೂಮಿನಿಯಂ ಶೀಟ್‌ನಿಂದ ನಿರ್ಮಿಸಲಾದ ಶೆಡ್‌ನೊಳಗೆ ಸ್ಫೋಟಕ ಸಾಮಾಗ್ರಿ ಮತ್ತು ಕಚ್ಚಾ ಸಾಮಾಗ್ರಿಗಳನ್ನು ಬಳಸಿ ಸ್ಫೋಟಕ ಸಿಡಿ ಮದ್ದುಗಳನ್ನು ತಯಾರಿಸುತ್ತಿರುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಕೇರಳ ತ್ರಿಶೂರಿನ ಚೆಲಕೆರೆಯ ಎಳನಾಡು ಸಮೀಪದ ಮುಟ್ಟಲಂಗೋಡು ವಲಿಪರಂಬಿಲ್‌ನ ಬಾಬು ಟಿ, ತಮಿಳ್ನಾಡು ವಿರುದ್‌ನಗರದ ಮಾನಸಪುರಂ ಬಳಿಯ ದೊರೆಸ್ವಾಮಿಪುರಂನ ಕಲಿರಾಜ್, ಕೇರಳದ ಕಾಸರಗೋಡಿನ ಕೇಳುಗುಡ್ಡೆಯ ಪ್ರೇಮ್ ನಿವಾಸದ ನರೇಂದ್ರ ಮತ್ತು ತಮಿಳುನಾಡು ವಿರುದ್‌ನಗರದ ದೊರೆಸ್ವಾಮಿಪುರಂನ ಕಮಲಕಣ್ಣನ್ ಎಂಬವರ ವಿರುದ್ಧ ಐಪಿಸಿ 286, 511 ಹಾಗೂ ಎಕ್ಸ್‌ಪ್ಲೋಸಿವ್ ಆಕ್ಟ್ 1884ರ 9ಬಿ(1)(ಬಿ)ರಡಿ ಪ್ರಕರಣ ದಾಖಲಾಗಿತ್ತು. ನಂತರ ಆರೋಪಿಗಳು ಜಾಮೀನು ಪಡೆದಿದ್ದರು. ತನಿಖೆ ಪೂರ್ಣಗೊಳಿಸಿದ ತನಿಖಾಧಿಕಾರಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದೀಗ ವಿಚಾರಣೆ ಪೂರ್ಣಗೊಳಿಸಿದ ಪುತ್ತೂರು ಅಡಿಷನಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿಯ ನ್ಯಾಯಾಧೀಶ ದೇವರಾಜ್ ವೈ.ಹೆಚ್. ಅವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳ ಪರ ನ್ಯಾಯವಾದಿಗಳಾದ ದೇವಾನಂದ ಕೆ, ಚಿನ್ಮಯ ರೈ ಮತ್ತು ಹರಿಣಿ ವಾದಿಸಿದ್ದರು.













