






ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಪುತ್ತೂರು ಇದರ ವತಿಯಿಂದ ತಾಲೂಕು ಮಟ್ಟದ ಗೀತಗಾಯನ (ದೇಶಭಕ್ತಿ ಗೀತೆ) ಹಾಗೂ ರೋವರ್-ರೇಂಜರ್‌ಗಳಿಗೆ ಜಾನಪದ ಗೀತೆ ಸ್ಪರ್ಧೆಯು ಆ.೨೮ರಂದು ಬೊಳುವಾರು ಸ್ಕೌಟಿಂಗ್ ಸೆಂಟರ್ ಹಾಲ್‌ನಲ್ಲಿ ನಡೆಯಿತು.


ಸ್ಪರ್ಧೆಯಲ್ಲಿ 38 ಸ್ಕೌಟ್, ಗೈಡ್, ಕಬ್, ಬುಲ್‌ಬುಲ್, ರೋವರ್ ಮತ್ತು ರೇಂಜರ್ ತಂಡಗಳು ಭಾಗವಹಿಸಿದ್ದು, ಕಬ್ ವಿಭಾಗದಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ, ನರಿಮೊಗರು(ಪ್ರ), ಸ.ಹಿ.ಪ್ರಾ. ಶಾಲೆ, ಕಾಣಿಯೂರು(ದ್ವಿ), ಬೆಥನಿ ಆಂಗ್ಲ ಮಾಧ್ಯಮ ಶಾಲೆ, ಪಾಂಗ್ಳಾಯಿ(ತೃ), ಬುಲ್‌ಬುಲ್ ವಿಭಾಗದಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ, ನರಿಮೊಗರು(ಪ್ರ), ಸರಸ್ವತಿ ವಿದ್ಯಾ ಮಂದಿರ, ಪುರುಷರಕಟ್ಟೆ(ದ್ವಿ), ಸ.ಹಿ.ಪ್ರಾ. ಶಾಲೆ, ಕಾಣಿಯೂರು( ತೃ), ಸ್ಕೌಟ್ ವಿಭಾಗದಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ, ನರಿಮೊಗರು(ಪ್ರ), ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ(ದ್ವಿ), ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಂಪಾಡಿ ಮತ್ತು ಸುಧಾನ ವಸತಿಯುತ ಶಾಲೆ, ಮಂಜಲಡ್ಪು(ತೃ), ಗೈಡ್ಸ್ ವಿಭಾಗದಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ, ನರಿಮೊಗರು(ಪ್ರ), ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ(ದ್ವಿ), ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಂಪಾಡಿ(ತೃ), ರೋವರ್ ವಿಭಾಗ ಸೇಂಟ್ ಫಿಲೋಮಿನಾ ಕಾಲೇಜು, ದರ್ಬೆ, ರೇಂಜರ್ ವಿಭಾಗದಲ್ಲಿ ಸೇಂಟ್ ಫಿಲೋಮಿನಾ ಕಾಲೇಜು, ದರ್ಬೆ ವಿಜೇತರಾದರು. ಪ್ರಥಮ ಸ್ಥಾನವನ್ನು ಪಡೆದ ಶಾಲೆ/ಕಾಲೇಜುಗಳ ತಂಡಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಿದ್ಯಾಗೌರಿ ಅವರು ತಿಳಿಸಿದ್ದಾರೆ.













