






ಸುಳ್ಯ: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ಜನ್ಮದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 11 ಶುಕ್ರವಾರ ಸಂಜೆ 4 ಗಂಟೆಗೆ ಸುಳ್ಯದಲ್ಲಿ ಬೃಹತ್ ಇಸ್ಲಾಮಿಕ್ ಸಾಂಸ್ಕೃತಿಕ ಕಲಾ ವೈಭವದ ಮೆರವಣಿಗೆ ಹಾಗೂ ಇಷ್ಕೆ ಮದೀನಾ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.


ಈ ಹಿನ್ನೆಲೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ವಿಜೃಂಭಣೆಯ ಈದ್ ಮಿಲಾದ್ ಆಚರಣೆಗಾಗಿ ತಾಲೂಕು ಮಿಲಾದ್ ಸಮಿತಿ ರಚಿಸಿಕೊಂಡು, ಗಾಂಧಿನಗರದ ಜಿಟಿಸಿ ಮೆಟ್ರೋ ಬನಾತ್ ಟವರ್‌ನಲ್ಲಿ ಸಮಿತಿಯ ಕಚೇರಿಯನ್ನು ಉದ್ಘಾಟಿಸಲಾಯಿತು.



ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫಾ ಶುಭ ಹಾರೈಸಿದರು.ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಕೆ.ಬಿ. ಇಬ್ರಾಹಿಂ ಪೋಸ್ಟರ್ ಬಿಡುಗಡೆ ಮಾಡಿದರು. ಯುವ ಉದ್ಯಮಿ ಫೈಝಲ್ ಕಟ್ಟೆಕ್ಕಾರ್ ಸ್ಕ್ಯಾನರ್ ಚಾಲನೆ ನೀಡಿದರು. ಅನ್ಸಾರ್ ಕಾರ್ಯದರ್ಶಿ ಬಷೀರ್ ಸಪ್ನಾ ಉಪಸ್ಥಿತರಿದ್ದರು.ತಾಲೂಕು ಮಿಲಾದ್ ಸಮಿತಿ ಅಧ್ಯಕ್ಷ ಮುನಾಫ್ ನಾವೂರು ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಕೆ.ಎಸ್. ಉಮ್ಮರ್, ರಶೀದ್ ಜಟ್ಟಿಪಳ್ಳ, ಇಕ್ಬಾಲ್ ಸುಣ್ಣಮೂಲೆ, ಖಲಂದರ್ ಎಲಿಮಲೆ, ಅಬ್ದುಲ್ ಕಲಾಂ ಬೀಜಕೊಚ್ಚಿ, ನವಾಜ್ ಪಂಡಿತ್ ಜಯನಗರ, ರಶೀದ್ ಅಡ್ವೋಕೇಟ್, ಮನ್ಸೂರ್ ಮೆಟ್ರೋ, ಅಚ್ಚು ಕಲ್ಲುಮುಟ್ಲು, ಮುಸ್ತಫಾ ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು. ಉನೈಸ್ ಪೆರಾಜೆ ಸ್ವಾಗತಿಸಿ ವಂದಿಸಿದರು.










