






ಪುತ್ತೂರು: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಸವಣೂರು ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುವ ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ವಿದ್ಯಾರ್ಥಿಗಳು, 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.


ತಂಡದಲ್ಲಿ 9ನೇ ತರಗತಿಯ ಆಕಾಂಕ್ಷ, ಮಾನ್ಯ, ಆತ್ಮಿ, ಭೂಮಿಕಾ, ವಿಭಾ, 10ನೇ ತರಗತಿಯ ಧನ್ವಿ ಸುಧೀರ್, ಧನುಷಾ, ಪೂಜನ ಹಾಗೂ ಮಾನ್ವಿ, ಭಾಗವಹಿದ್ದರು. ಧನುಷಾ ಇವರು ಉತ್ತಮ ಎತ್ತುಗೆಗಾರ್ತಿ ಪ್ರಶಸ್ತಿ ಮತ್ತು ಆತ್ಮಿ ಉತ್ತಮ ಹೊಡೆತಗಾರ್ತಿ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.













