ಅಳಿಕೆ: ಬಾವಿಗೆ ಹಾರಿ ವೃದ್ದೆ ಆತ್ಮಹತ್ಯೆ

0

ವಿಟ್ಲ: ವೃದ್ಧೆಯೊಬ್ಬರು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳಿಕೆ ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದಿದೆ.

ಪುತ್ತೂರಿನಲ್ಲಿ ಆಟೋ ಚಾಲಕರಾಗಿರುವ ನಾರಾಯಣ ಗೌಡರವರ ತಾಯಿ ಗಿರಿಜಾ ಗೌಡ (78 ವ.) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.

ಕೆಲವು ದಿನಗಳ ಹಿಂದೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಗಿರಿಜಾ ರವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಅನಾರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಆ.31ರಂದು ಸಂಜೆ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲು ಮನೆಯವರು ಸಿದ್ಧತೆ ನಡೆಸಿದ್ದರೆನ್ನಲಾಗಿದೆ.

ನಾರಾಯಣ ಗೌಡ ರವರು ಪುತ್ತೂರಿನಲ್ಲಿ ಆಟೋ ಚಾಲನೆಗೆ ತೆರಳಿದ್ದು, ಸೊಸೆ ಪುಷ್ಪಲತಾರವರು ಮಗುವನ್ನು ಕರೆತರಲು ಪಡಿಬಾಗಿಲು ಅಂಗನವಾಡಿಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಅವರು ಬಾವಿಗೆ ಹಾರಿದ್ದರೆನ್ನಲಾಗಿದೆ. ಅಂಗನವಾಡಿಯಿಂದ ಪುಷ್ಪಲತಾರವರು ಮರಳಿ ಬಂದು ನೋಡಿದಾಗ ಗಿರಿಜಾರವರು ನಾಪತ್ತೆಯಾಗಿದ್ದರು. ವಿವಿದೆಡೆ ಹುಟುಕಾಟ ನಡೆಸಿದಾಗ ಅವರು ಪತ್ತೆಯಾಗಿರಲಿಲ್ಲ. ಬಳಿಕ ಮನೆ ಸಮೀಪದ ಬಾವಿಯಲ್ಲಿ ಅವರ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ.

ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ‘ಫ್ರೆಂಡ್ಸ್ ವಿಟ್ಲ’ ದ ಮುರಳೀಧರ ಅವರ ನೇತೃತ್ವದ ತಂಡ ಬಾವಿಯಿಂದ ಮೃತದೇಹವನ್ನು ಮೇಲಕ್ಕೆತ್ತಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here