






ಪುತ್ತೂರು: ಮೇಜರ್ ಧ್ಯಾನ್ ಚಂದ್ ಭಾರತ ಕಂಡ ಶ್ರೇಷ್ಠ ಕ್ರೀಡಾ ಸಾಧಕರಲ್ಲಿ ಒಬ್ಬರು. ಕ್ರೀಡಾ ಮನೋಭಾವದೊಂದಿಗೆ ದೇಶಪ್ರೇಮವನ್ನು ಜಗತ್ತಿಗೆ ಸಾರಿದ ಕ್ರೀಡಾಪಟು. ಇವರ ಕಥೆ ಓದುವಾಗ ನಮ್ಮಲ್ಲೂ ಕ್ರೀಡಾ ಸ್ಫೂರ್ತಿ ಉಂಟಾಗುತ್ತದೆ ಎಂದು ಶಾಲಾ ವಿದ್ಯಾರ್ಥಿನಿ ಮೌಲ್ಯ, ಮೇಜರ್ ಧ್ಯಾನ್ ಚಂದ್ ಅವರ ಘಟನೆಗಳನ್ನು ಉಲ್ಲೇಖಿಸುತ್ತಾ ಕ್ರೀಡಾ ದಿನದ ಮಹತ್ವವನ್ನು ತಿಳಿಸಿದರು.


ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥ ಕ್ರೀಡಾ ದಿನಾಚರಣೆ ನಡೆಯಿತು. ಬಳಿಕ ಮಕ್ಕಳಿಗೆ ಹಾಕಿ ಬಗ್ಗೆ ಪ್ರಾತ್ಯಕ್ಷಿಕ ಮಾಹಿತಿ ನೀಡಲಾಯಿತು.ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ, ಹರಿಣಾಕ್ಷಿ, ನಮಿತಾ ಸಂಯೋಜಿಸಿದರು.













