






ಬೆವರು ಸುರಿಸಿ ದುಡಿದರೆ ಮಾತ್ರ ಬದುಕು ಮತ್ತು ಯಶಸ್ಸು ಸಾಧ್ಯ: ಆನಂದ ಸುವರ್ಣ


ಕೆಯ್ಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ)ಪುತ್ತೂರು, ಪ್ರಗತಿಬಂಧು,ಸ್ವಸಹಾಯ ಸಂಘಗಳ ಕೆಯ್ಯೂರು, ದೇರ್ಲ, ದೇವಿನಗರ ಬೊಳಿಕ್ಕಲ ಒಕ್ಕೂಟಗಳ ಪದಗ್ರಹಣ ಸಮಾರಂಭವು ಜಯಕರ್ನಾಟಕ ಸಭಾಭವನ ಕೆಯ್ಯೂರಿನಲ್ಲಿ ಅ.30ರಂದು ನಡೆಯಿತು.




ಬೆಳಿಗ್ಗೆ ಧರ್ಮರಸು ಭಜನಾ ತಂಡ ಪಾಲ್ತಾಡಿ ಭಜನಾ ಕಾರ್ಯಕ್ರಮ ನಡೆದು ನಂತರ ಶ್ರೀ ದುರ್ಗಾ ಕುಣಿತ ಭಜನಾ ತಂಡ ಕಣಿಯಾರು ಇವರಿಂದ ಕುಣಿತ ಭಜನೆ ನಡೆಯಿತು. ನಂತರ ಕಾರ್ಯಕ್ರಮದ ಉದ್ಧಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತಾಡಿದ ಅವರು ಸ್ವಂತ ಸ್ವಾವಲಂಬನೆಯ ಬದುಕು ದುಡಿಮೆಯಿಂದ ಮನುಷ್ಯನ ಜೀವನ, ಬೆವರು ಸುರಿಸಿ ದುಡಿದರೆ ಮಾತ್ರ ಬದುಕು ಮತ್ತು ಯಶಸ್ಸು ಸಾಧ್ಯ. ಗ್ರಾಮದ ಜನರನ್ನು ಒಟ್ಟು ಗೂಡಿಸುವ ಶಕ್ತಿ ಗ್ರಾಮಾಭಿವೃದ್ದಿ ಯೋಜನೆ ಎಂಬ ಸಂಘಟನೆಗೆ ಇದೆ, ಇಂತಹ ಸಂಘಟನೆಯಿಂದ ಸದಸ್ಯರಿಗೆ ಬಲ ಬಂದಂತಾಗಿದೆ ಎಂದು ಶುಭ ಹಾರೈಸಿದರು. ನಂತರ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಮಾಜಿ ಅಧ್ಯಕ್ಷ ಮಹಾಬಲ ರೈ ಒಳ ತಡ್ಕ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷರಾದ ಉದಯಕುಮಾರ್ ಜಿ.ಕೆ ಅಧ್ಯಕ್ಷತೆ ವಹಿಸಿ ಇಂತಹ ದಾರ್ಮಿಕ ಕಾರ್ಯಕ್ರಮಗಳು ನಡೆದು ಸಮಾಜದ ಬದಲಾವಣೆಯಾದರೆ ಒಂದು ಉತ್ತಮವಾದ ಗ್ರಾಮಾಭಿವೃದ್ಧಿಯಾಗಿ ಸಮಾಜಕ್ಕೆ ಪೂರಕವಾಗುತ್ತದೆ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಹೊಸಮ್ಮ ದೈವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಸ್. ಬಿ ಜಯರಾಮ ರೈ ಬಳಜ್ಜ, ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಕೆ ಜಯರಾಮ ರೈ ಕೆಯ್ಯೂರು, ಜನಜಾಗೃತಿ ವೇದಿಕೆ ಕೆಯ್ಯೂರು ವಲಯ ಅಬ್ದುಲ್ ಖಾದರ್ ಮೇರ್ಲ, ಕೆಯ್ಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಜನಜಾಗೃತಿ ಸದಸ್ಯ ಕೆಯ್ಯೂರು ಆನಂದ ರೈ ದೇವಿ ನಗರ, ಮತ್ತು ನೂತನ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಯೋಜನಾಧಿಕಾರಿ ಶಶಿಧರ .ಕೆ, ಮಾತಾನಾಡಿ ಮನಸ್ಸಿನ ಬದಲಾವಣೆಗಳನ್ನು ಗ್ರಾಮಾಭಿವೃದ್ದಿ ಮೂಲಕ ಪರಿಹರಿಸಬಹುದು, ಗ್ರಾಮಾಭಿವೃದ್ದಿ ಯೋಜನೆಯಿಂದ ಎಲ್ಲರೂ ಆರ್ಥಿಕ ಉಳಿತಾಯ, ಸಾಮಾಜಿಕ ಬದ್ದತೆ, ಶಿಸ್ತು ಆಳವಡಿಸುದರ ಜತೆಗೆ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಿದೆ ಎಂದರು.
ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಕೆಯ್ಯೂರು, ದೆರ್ಲ, ದೇವಿನಗರ, ಬೊಳಿಕಲ ಒಕ್ಕೂಟಗಳು ಕೆಯ್ಯೂರು ವಲಯ ಒಕ್ಕೂಟದ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ನಿಕಟ ಪೂರ್ವ ಪದಾಧಿಕಾರಿಗಳು ತಾಂಬೂಲ, ಪುಸ್ತಕ, ಹಸ್ತಾಂತರಿಸಯದರ ಮೂಲಕ ಅಧಿಕಾರ ಹಸ್ತಾಂತರಿಸಿದರು. ದೇವಿನಗರ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ 3ನೇ ವರ್ಷದ ಒಕ್ಕೂಟದ ಸಾಧನ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಈ ಸಂದರ್ಭದಲ್ಲಿ ಬೊಳಿಕಲ ಒಕ್ಕೂಟ ನಿಕಟ ಪೂರ್ವ ಅಧ್ಯಕ್ಷ ಉದಯಕುಮಾರ್, ದೆರ್ಲ ಒಕ್ಕೂಟ ನೂತನ ಅಧ್ಯಕ್ಷ ಬಾಬು ಪಾಟಾಳಿ ದೇರ್ಲ ತಮ್ಮ ಅನುಭವದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು., ಈ ಸಂದರ್ಭದಲ್ಲಿ ಚೈತನ್ಯ ಒಕ್ಕೂಟದ ಸದಸ್ಯ ಸುಶೀಲ ಹಾಗೂ ಲೀಲಾವತಿ ಇವರಿಗೆ ಅನುದಾನ ಮತ್ತು ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮವು ನಡೆಯಿತು.
ಲಕ್ಷ್ಮಿಸುಂದರ ಪ್ರಾರ್ಥನೆಯೊಂದಿಗೆ ಬೇವಿನಗರ ಒಕ್ಕೂಟ ನೂತನ ಅಧ್ಯಕ್ಷ ಯುವರಾಜ್ ಪೂಂಜ ಸ್ವಾಗತಿಸಿ, ಬೊಳಿಕಲ ಒಕ್ಕೂಟದ ಉಪಾಧ್ಯಕ್ಷೆ ಪುಷ್ಪಾವತಿ ವಂದಿಸಿ, ವಲಯ ಮೇಲ್ವಿಚಾರಕಿ ಶುಭಾವತಿ ಪಿ.ಸಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಪೂಜಾರಿ ಕಣಿ ಯಾರು, ಬೇಬಿ ಪೂಜಾರಿ ದೇರ್ಲ, ಉದಯಕುಮಾರ್, ಮಮತಾ ಎಸ್ ರೈ ಕೆಯ್ಯೂರು, ಬಾಲಕೃಷ್ಣ ಗೌಡ, ಸೌಮ್ಯ ಅನಿರುದ್ಧ, ಮತ್ತು ಸೇವಾಪ್ರತಿನಿಧಿಗಳಾದ ವಾರಿಜ ವೈ. ಲತಾ ಕೆ ರಜನಿ, V.L.E. ನಯನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆಯ್ಯೂರು, ದೇರ್ಲ, ದೇವಿನಗರ, ಬೊಳಿಕ್ಕಲ ನಾಲ್ಕು ಒಕ್ಕೂಟಗಳ ವಲಯ ಪದಾಧಿಕಾರಿಗಳು ಸಹಕರಿಸಿದರು.










