






ಪುತ್ತೂರು : ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ತೆರವು ಆಗಿದ್ದ ಮೂರು ನಿರ್ದೇಶಕರುಗಳ ಸ್ಥಾನಕ್ಕೆ ನಾರಾಯಣ ಗೌಡ ಪೂವ, ಮನೋಹರ್ ರೈ ಕೆರೆಕ್ಕೋಡಿ ಮತ್ತು ರಾಜೇಶ್ ರೈ ಮುಗೇರು ಅವರುಗಳನ್ನು ಅವಿರೋಧವಾಗಿ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ, ಉಪಾಧ್ಯಕ್ಷೆ ಆಶಾ ರೈ ಕಲಾಯಿ ಮತ್ತು ನಿರ್ದೇಶಕರುಗಳು ತಿಳಿಸಿದ್ದಾರೆ.


ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಸೌಮ್ಯಲತಾ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಹರೀಶ್ ರವರು ರಾಜಿನಾಮೆ ನೀಡಿದ್ದು, ತೆರವು ಆದ ಸ್ಥಾನಕ್ಕೆ ಸೌಮ್ಯಲತಾ ಮಜಲು-ಸವಣೂರು ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಜುಜೆ ಹಾಗೂ ಉಪಾಧ್ಯಕ್ಷೆ ಆಶಾ ರೈ ಕಲಾಯಿ ತಿಳಿಸಿದ್ದಾರೆ













