







ಪುತ್ತೂರು: ಸರ್ವೆ ಗ್ರಾಮದ ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಇಲ್ಲಿ 355ನೇ ಆರಾಧನಾ ಮಹೋತ್ಸವ ಆ.29ರಿಂದ ಆ.31ರ ವರೆಗೆ ಪೂಜೆ, ಅಭಿಷೇಕ, ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಆ.29ರಂದು ರೊ. ದತ್ತಾತ್ರೇಯ ರಾವ್ ಅವರ ಸಂಗೀತ, ಆ.30ರಂದು ಕುಣಿತ ಭಜನೆ ಹಾಗೂ ಆ.31ರಂದು ಯಕ್ಷಗಾನ ತಾಳಮದ್ದಳೆ ಮನರಂಜಿಸಿತು. ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಆಡಳಿತ ವ್ಯವಸ್ಥಾಪಕ ಡಾ.ಕೆ ಸೀತಾರಾಮ ಭಟ್ ಕಲ್ಲಮ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.












