






ಇದು ಅತೀ ದೊಡ್ಡ ಪುಣ್ಯದ ಕೆಲಸವಾಗಿದೆ: ದತ್ತಾತ್ರೇಯ ರಾವ್


ಕಾಯಿಲೆ ಬರುವ ಮೊದಲು ನಾವು ಎಚ್ಚರಗೊಳ್ಳುವ ಅಗತ್ಯವಿದೆ: ಡಾ. ಅನನ್ಯ ಲಕ್ಷ್ಮಿ



ಪುತ್ತೂರು: ಪ್ರಗತಿ ಸ್ಪೆಷಾಲಿಟಿ ಹಾಸ್ಪಿಟಲ್,ಪ್ರಗತಿ ಹಾಸ್ಪಿಟಲ್ ಎಜುಕೇಶನ್ ಟ್ರಸ್ಟ್, ಪುತ್ತೂರು ರೋಟರಿ ಮ್ಯಾಮೊಗ್ರಫಿ ಸೆಂಟರ್, ರೋಟರಿ ಕ್ಲಬ್ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ನಿರಂತರ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆ.1ರಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಬೊಳುವಾರ್ ನಲ್ಲಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಿತು.
ರೋಟರಿ ಕ್ಲಬ್ ಪುತ್ತೂರುಇದರ ಅಧ್ಯಕ್ಷರಾದ ದತ್ತಾತ್ರೇಯ ರಾವ್ ರವರು ಮಾತನಾಡಿ ಹಲವಾರು ವರುಷದಿಂದ ಪ್ರಗತಿ ಆಸ್ಪತ್ರೆಯ ಜೊತೆಗೆ ನಾವಿದ್ದೇವೆ. ಅತೀ ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಅತೀ ದೊಡ್ಡ ಪುಣ್ಯದ ಕೆಲಸವಾಗಿದೆ. ಈ ಒಂದು ಶಿಬಿರದ ಮೂಲಕ ಬಹಳಷ್ಟು ಮಂದಿಗೆ ವೈದ್ಯಕೀಯ ಸೌಲಭ್ಯ ಸಿಕ್ಕಿದೆ. ಎಲ್ಲರೂ ಆರೋಗ್ಯವಂತರಾಗಿರುವುದು ನಮ್ಮ ಆಶಯವಾಗಿದೆ ಎಂದರು.

ಆಸ್ಪತ್ರೆಯ ವೈದ್ಯರಾದ ಡಾ. ಅನನ್ಯ ಲಕ್ಷ್ಮಿರವರು ಮಾತನಾಡಿ ಕಾಯಿಲೆ ಬರುವ ಮೊದಲು ನಾವು ಎಚ್ಚರಗೊಳ್ಳುವ ಅಗತ್ಯವಿದೆ. ಪ್ರತೀ ತಿಂಗಳು ಒಂದು ಆಸ್ಪತ್ರೆಯಲ್ಲಿ ಹಾಗೂ ಇನ್ನೊಂದು ಹೊರಗಡೆ ಉಚಿತ ಕ್ಯಾಂಪ್ ಅನ್ನು ಮಾಡಲಾಗುತ್ತಿದೆ. ಹಲವಾರು ಮಂದಿ ಈ ಕ್ಯಾಂಪ್ ನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಶಿಬಿರದ ಬಗ್ಗೆ ಯಾವುದೇ ಭಯ ಬೇಡ. ತಮ್ಮ ಆರೋಗ್ಯದ ಸುರಕ್ಷತೆಗಾಗಿ ಇಂತಹ ಶಿಬಿರಗಳಲ್ಲಿ ಭಾಗವಹಿಸುವುದು ಅತೀ ಅಗತ್ಯ. ನಿಮ್ಮ ಊರಿನಲ್ಲಿ ಕ್ಯಾಂಪ್ ಮಾಡಬೇಕಿದ್ದರೆ ನಮ್ಮನ್ನು ಸಂಪರ್ಕಿಸಿ. ಈ ಒಂದು ಗ್ರಾಮೀಣ ಭಾಗದಲ್ಲಿ ರೋಟರಿಯವರ ಸಹಕಾರದಲ್ಲಿ ಪ್ರಗತಿ ಆಸ್ಪತ್ರೆಯಲ್ಲಿ ಮ್ಯಾಮೋಗ್ರಪಿ ವ್ಯವಸ್ಥೆ ಮಾಡಲಾಗಿದೆ. ಅರ್ಹ ರೋಗಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಶಿಬಿರದಲ್ಲಿ ರಕ್ತದೊತ್ತಡ ಪರೀಕ್ಷೆ, ಸಕ್ಕರೆ ಕಾಯಿಲೆ ಪರೀಕ್ಷೆ, HBAIC ಪರೀಕ್ಷೆ, ಇಸಿಜಿ ಪರೀಕ್ಷೆ, ಥೈರಾಯ್ಡ್ ಪರೀಕ್ಷೆ, ಸ್ತನ ಕಾಯಿಲೆ ಪತ್ತೆ ಪರೀಕ್ಷೆ (ಮ್ಯಾಮೋಗ್ರಫಿ), ಮಕ್ಕಳ ತಪಾಸಣಾ ಶಿಬಿರ, ಸ್ಪೈ ರೋಮೆಟ್ರಿ ಪರೀಕ್ಷೆ ನಡೆಸಲಾಯಿತು. ಬಿಪಿಎಲ್ ಕಾರ್ಡ್ ದಾರರಿಗೆ ಸ್ತನ ಕಾಯಿಲೆ ಪತ್ತೆಯ ಪರೀಕ್ಷೆ (ಮ್ಯಾಮೋಗ್ರಫಿ) ಉಚಿತ ಹಾಗೂ ಉಳಿದವರಿಗೆ ರಿಯಾಯಿತಿ ದರದಲ್ಲಿ ಮಾಡಲಾಯಿತು. ಹಲವಾರು ಮಂದಿ ಈ ಶಿಬಿರದ ಪ್ರಯೋಜನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಯು ಶ್ರೀಪತಿ ರಾವ್, ಡಾ.ಸುದಾ ಎಸ್. ರಾವ್, ಪ್ರಮುಖರಾದ ಹೆರಾಲ್ಡ್ ಮಾರ್ಥ್, ಶ್ರೀಧರ ಗೌಡ ಕಣಜಾಲು, ಬಾಲಕೃಷ್ಣ,ಪ್ರಗತಿ ಗ್ರೂಪ್ ಆಪ್ ಕಾಲೇಜಿನ ಆಡಳಿತಾಧಿಕಾರಿ ಪ್ರೀತಾ ಹೆಗ್ಡೆ, ವೃದಾಪ್ಯ & ಮಧುಮೇಹ ತಜ್ಞರಾದ ಡಾ. ಅನನ್ಯಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.

ನಮ್ಮ ಆರೋಗ್ಯವನ್ನು ಕಾಪಿಡುವ ಪ್ರಯತ್ನ ನಮ್ಮದಾಗಬೇಕು
ಜನರ ಆರೋಗ್ಯವನ್ನು ಕಾಪಿಡುವ ನಿಟ್ಟಿನಲ್ಲಿ ಈ ಒಂದು ಶಿಬಿರದ ಆಯೋಜನೆ ಮಾಡಲಾಗಿದೆ. ಜನರ ಮನಸ್ಸಿನ ಒತ್ತಡ ಕಾಯಿಲೆಯ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಕ್ಯಾಂಪ್ ನ ಉದ್ದೇಶ ಜನರಿಗೆ ಪ್ರಯೋಜನವಾಗಲು. ನಮ್ಮ ಆರೋಗ್ಯವನ್ನು ಕಾಪಿಡುವ ಪ್ರಯತ್ನ ನಮ್ಮದಾಗಬೇಕು. ಆರು ತಿಂಗಳಿಗೊಮ್ಮೆಯಾದರೂ ನಾವು ಇಂತಹ ಕ್ಯಾಂಪ್ ಗಳಲ್ಲಿ ಭಾಗವಹಿಸಿ ಆರೋಗ್ಯದ ಬಗ್ಗೆ ಜಾಗೃತರಾಗಬೇಕಿದೆ.
ಡಾ. ಯು ಶ್ರೀಪತಿ ರಾವ್
ಆಡಳಿತ ನಿರ್ದೇಶಕರು
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಬೊಳುವಾರು










