






ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಪರಿಸರದಲ್ಲಿ ಕೊಳವೆಬಾವಿ ಪಂಪು ಕೆಟ್ಟು ಹೋಗಿ ನೀರಿಗೆ ಸಮಸ್ಯೆ ಉಂಟಾದ ಬಗ್ಗೆ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ನೇತೃತ್ವದಲ್ಲಿ ಇತ್ತೀಚೆಗೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿ ಕೊಳವೆಬಾವಿ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿರುವ ಶಾಸಕರು ಟಾಸ್ಕ್ಫೋರ್ಸ್ ಮೂಲಕ ಕೊಳವೆಬಾವಿ ಮಂಜೂರು ಮಾಡಿದ್ದು ಸೆ.2ರಂದು ಕೊಳವೆ ಬಾವಿ ಕೊರೆಯುವ ಕಾರ್ಯ ಆರಂಭಗೊಂಡಿದೆ.


ನಮ್ಮ ಮನವಿಗೆ ಶಾಸಕರು ತಕ್ಷಣ ಸ್ಪಂದಿಸಿದ್ದು ಜನಸಾಮಾನ್ಯರ ಸಮಸ್ಯೆ ಅರಿತು ಕೂಡಲೇ ಕಾರ್ಯಪ್ರವೃತ್ತರಾದ ಶಾಸಕರ ಕಾರ್ಯ ಶ್ಲಾಘನೀಯ, ಗ್ರಾಮಸ್ಥರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ತಿಳಿಸಿದ್ದಾರೆ.



ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಪೂಜಾರಿ ಬೊಳ್ಳಾಡಿ, ಅಶ್ರಫ್ ಉಜಿರೋಡಿ, ರಕ್ಷಿತ್ ರೈ ಮುಗೇರು, ನಾರಾಯಣ ಪೂಜಾರಿ ಬೊಳ್ಳಾಡಿ, ಅಝೀಝ್ ನೀರ್ಪಾಡಿ, ಮಹಮ್ಮದ್ ಬೊಳ್ಳಾಡಿ ಉಪಸ್ಥಿತರಿದ್ದರು.










