






ಕುಂಬ್ರ ಶಾಖೆಯಲ್ಲಿ ದೀಪ ಪ್ರಜ್ವಲಿಸಿ ಸ್ಥಾಪನ ದಿನ ಆಚರಣೆ


ಕುಂಬ್ರ :ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು 2002 ರ ಸೆ. 2 ರಂದು ಆರಂಭಗೊಂಡು ಯಶಸ್ವಿ 24 ವರ್ಷಗಳನ್ನು ಪೂರೈಸಿ 25 ನೇ ವರ್ಷಕ್ಕೆ ಪಾದಾರ್ಪಣೆಗೊಂಡ ಅಂಗವಾಗಿ ಸ್ಥಾಪನಾ ದಿನಾಚರಣೆಯನ್ನು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕುಂಬ್ರ ಶಾಖೆಯಲ್ಲಿ ದೀಪ ಪ್ರಜ್ವಲಿಸುವ ಮೂಲಕ ಸೆ. 2 ರಂದು ಆಚರಿಸಲಾಯಿತು.



ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ಕುಂಬ್ರ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ಲೋಕೇಶ್ ಚಾಕೋಟೆ, ಸಲಹಾ ಸಮಿತಿ ಸದಸ್ಯರಾದ ಶಿವರಾಮ ಗೌಡ ಇದ್ಯಾಪೆ,ನಾಗಪ್ಪ ಗೌಡ ಬೊಮ್ಮೆಟ್ಟಿ, ಶ್ರೀಧರ ಗೌಡ ಅಂಗಡಿಹಿತ್ಲು ತಿರುಮಲೇಶ್ವರ ಗೌಡ ದೊಡ್ಡಮನೆ , ರಾಮಣ್ಣ ಗೌಡ ಬಸವನಹಿತ್ಲು,ಉಮೇಶ ಗೌಡ ಕನ್ನಯ, ರಾಮಕೃಷ್ಣ ಗೌಡ ಸಾಮೇತಡ್ಕ, ಕಿರಣ್ ಸಂಕಿರ್ಣದ ಮಾಲಕರಾದ ಪರಮೇಶ್ವರ ಗೌಡ, ಸರಾಫರ ಜಯರಾಮ ಆಚಾರ್ಯ, ಸಿಬ್ಬಂದಿಗಲಾದ ಸಂಧ್ಯಾ, ದಿನೇಶ್ ಕುಮಾರ್ ಉಪಸ್ಥಿತರಿದ್ದರು.ಶಾಖಾ ಮೆನೇಜರ್ ಹರೀಶ್ ವೈ ಸ್ವಾಗತಿಸಿ, ವಂದಿಸಿದರು.










