ಹಳೆನೇರೆಂಕಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ – ಓರ್ವ ಆರೋಪಿ ವಶ, ನಾಲ್ವರು ಪರಾರಿ

0

ರಾಮಕುಂಜ: ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದಲ್ಲಿ ಕೆಸಿಡಿಸಿಗೆ ಸೇರಿದ ಗುಡ್ಡ ಪ್ರದೇಶದಲ್ಲಿ ನಡೆಯುತ್ತಿದ್ದ ಉಳಾಯಿ-ಪಿದಾಯಿ ಇಸ್ಪೀಟ್ ಅಡ್ಡೆಗೆ ಕಡಬ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿ ಹಾಗೂ ಆಟಕ್ಕೆ ಬಳಸಿದ್ದ ನಗದು. ಇತರೇ ಸೊತ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಸೆ.1ರಂದು ರಾತ್ರಿ ನಡೆದಿದೆ. ಪೊಲೀಸ್ ದಾಳಿ ವೇಳೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.


ಕಡಬ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ಹಾಗೂ ಸಿಬ್ಬಂದಿಗಳು ಹಳೆನೇರೆಂಕಿ ಗ್ರಾಮದ ಒಡ್ಗಮೆ ಸಮೀಪ ಕೆಸಿಡಿಸಿಗೆ ಸೇರಿದ ಗುಡ್ಡ ಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಉಳಾಯಿ-ಪಿದಾಯಿ ಇಸ್ಪೀಟ್ ಆಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ್ದರು. ಪೊಲೀಸರು ಬರುತ್ತಿದ್ದಂತೆ ಸ್ಥಳದಲ್ಲಿದ್ದ ನವೀನ, ನಾಣ್ಯಪ್ಪ, ಶೋಬಿತ್, ಅರುಣಾ ಎಂಬವರು ಓಡಿ ಪರಾರಿಯಾಗಿದ್ದು ಹಳೆನೇರೆಂಕಿ ನಿವಾಸಿ ಕೇಶವ (52ವ.) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನಾ ಸ್ಥಳದಿಂದ ಇಸ್ಪೀಟ್ ಆಟವಾಡಲು ಬಳಸಿದ್ದ 52 ಇಸ್ಪೀಟ್ ಕಾರ್ಡ್‌ಗಳು, 1,020 ನಗದು, 2 ನೋಕಿಯಾ ಕೀ ಪ್ಯಾಡ್ ಸೆಟ್, 1 ಪ್ಲಾಸ್ಟಿಕ್ ಚೀಲ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here