ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನಲ್ಲಿ ಡೈಮಂಡ್ ಫೆಸ್ಟ್‌ಗೆ ಚಾಲನೆ

0

ಪುತ್ತೂರಿನ ಗ್ರಾಹಕರಿಗೆ ಡೈಮಂಡ್ ಪರಿಚಯ- ಸಹಜ ರೈ ಬಳೆಜ್ಜ
ಮುಳಿಯ ಸಂಸ್ಥೆಗೆ ಗ್ರಾಹಕರೇ ಅಡಿಪಾಯ- ಅರ್ಜುನ್ ಎಸ್. ಕೆ.

ಪುತ್ತೂರು: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನ ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರರಾಗಿರುವ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನಲ್ಲಿ ಸೆ.2ರಂದು ಡೈಮಂಡ್ ಫೆಸ್ಟ್‌ಗೆ ಚಾಲನೆ ನೀಡಲಾಯಿತು.

ಪುತ್ತೂರಿನ ಗ್ರಾಹಕರಿಗೆ ಡೈಮಂಡ್ ಪರಿಚಯ:
ಮುಖ್ಯ ಅತಿಥಿ, ಉದ್ಯಮಿ ಹಾಗೂ ವಿಜಯ ಸಾಮ್ರಾಟ್ ಸಂಸ್ಥಾಪಕ ಸಹಜ ರೈ ಬಳೆಜ್ಜ ಮಾತನಾಡಿ ಮುಳಿಯ ಎಂದರೆ ವಿಶ್ವಾಸ ನಂಬಿಕೆಗೆ ಮತ್ತೊಂದು ಹೆಸರು. ನಾನು ಸಣ್ಣವನಿದ್ದಾಗಲೇ ಮುಳಿಯ ಸಂಸ್ಥೆಗೆ ಕುಟುಂಬದೊಂದಿಗೆ ಬರುತ್ತಿದ್ದೆ. ಮುಳಿಯದವರು ಡೈಮಂಡ್ ವಿಶೇಷತೆಯನ್ನು ಪುತ್ತೂರಿನ ಗ್ರಾಹಕರಿಗೆ ಪರಿಚಯ ಮಾಡಿದ್ದಾರೆ. ಪುತ್ತೂರು ಜನತೆ ಭಾಗವಹಿಸಿ ಇದರ ಸದುಪಯೋಗ ಪಡೆಯಿರಿ ಎಂದರು. ಮುಳಿಯ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ನನಗೆ ಪರಿಚಿತರು. ಅವರು ವ್ಯವಹಾರಕ್ಕೆ ಮಾತ್ರ ಸೀಮಿತವಾಗದೆ ಸಾಮಾಜಿಕವಾಗಿಯೂ ಕೆಲಸ ಮಾಡಿದ್ದಾರೆ. ಸಿಬ್ಬಂದಿ ವರ್ಗ ಕೂಡ ಇಲ್ಲಿನ ಶಕ್ತಿಯಾಗಿದ್ದು ಪ್ರೀತಿಯಿಂದ ಸೇವೆ ನೀಡುತ್ತಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.

ಮುಳಿಯ ಸಂಸ್ಥೆಗೆ ಗ್ರಾಹಕರೇ ಭದ್ರ ಅಡಿಪಾಯ:
ನೆಹರೂನಗರದ ಮಾಸ್ಟರ್ ಪ್ಲಾನರಿಯ ನಿರ್ದೇಶಕ ಅರ್ಜುನ್ ಎಸ್. ಕೆ. ಮಾತನಾಡಿ ಬಿಲ್ಡಿಂಗ್‌ಗೆ ಉತ್ತಮ ಫೌಂಡೇಶನ್ ಇದ್ದ ಹಾಗೆ ಮುಳಿಯ ಸಂಸ್ಥೆಗೆ ಗ್ರಾಹಕರೇ ಭದ್ರ ಅಡಿಪಾಯವಾಗಿ ಇದ್ದಾರೆ. ಗ್ರಾಹಕರ ನಂಬಿಕಸ್ಥ ಸಂಸ್ಥೆಯಾಗಿದ್ದು ಮನಗೆದ್ದಿದೆ. ನನ್ನ ಅಜ್ಜ ನ ಕಾದಿಂದಲೂ ಮುಳಿಯದೊಂದಿಗೆ ನಮಗೆ ಸ್ನೇಹ ಇದೆ. ಇಂತಹ ಸಂಸ್ಥೆ ಉನ್ನತವಾಗಿ ಬೆಳೆಯಲಿ ಎಂದು ಹೇಳಿ ಡೈಮಂಡ್ ಫೆಸ್ಟ್ ಆಯೋಸಿದ ಮುಳಿಯದವರಿಗೆ ಅಭಿನಂದನೆ ತಿಳಿಸಿದರು.

ಜನಸಾಮಾನ್ಯನಿಗೂ ಡೈಮಂಡ್ ಖರೀದಿ ಫೆಸ್ಟ್ ಉದ್ದೇಶ:
ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನ ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ವರ್ಷ 2 ಬಾರಿ ಡೈಮಂಡ್ ಫೆಸ್ಟ್ ಆಯೋಜಿಸುತ್ತಿದ್ದೇವೆ. ಡೈಮಂಡ್ ಗಾಂಭಿರ್ಯ ನೀಡುವ ಆಭರಣವಾಗಿದ್ದು ಗ್ರಾಹಕರಿಗೆ ಇದನ್ನು ಪರಿಚಯ ಮಾಡುವುದು, ಜನಸಾಮಾನ್ಯನು ಕೂಡ ಡೈಮಂಡ್ ಆಭರಣ ಖರೀದಿ ಮಾಡಬಹುದು ಫೆಸ್ಟ್ ಉದ್ದೇಶವಾಗಿದೆ. ರೂ. 7 ಸಾವಿರ ದಿಂದ 25 ಲಕ್ಷ ದವರೆಗಿನ ಡೈಮಂಡ್ ಇದ್ದು ಮಧ್ಯಮ ವರ್ಗಕ್ಕೆ ಅನುಕೂಲಕರವಾದ ರೇಂಜ್ ಇಲ್ಲಿದೆ. ಡೈಮಂಡ್ ಖರೀದಿ ಮುಳಿಯದಿಂದಲೇ ಆರಂಭವಾಗಲಿ ಎಂದರು.

ಹೊಸ ವಿನ್ಯಾಸಗಳ ಪ್ರದರ್ಶನ:
ಡೈಮಂಡ್‌ನಲ್ಲಿ ಲಭ್ಯವಿರುವ ನೂತನ ವಿನ್ಯಾಸಗಳ ಆಭರಣಗಳನ್ನು ಅತಿಥಿಗಳು ಪ್ರದರ್ಶಿಸಿದರು.ಸಿಬ್ಬಂದಿ ಹರೀಶ್ ಸ್ವಾಗತಿಸಿ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್ ವಂದಿಸಿದರು. ಮೃದುಲಾ ಪ್ರಾಥಿಸಿ ಕಾರ್ಯಕ್ರಮ ನಿರೂಪಿಸಿದರು.

ಗೋಲ್ಡ್ ರೇಟ್‌ನಲ್ಲಿ ಡೈಮಂಡ್ ಖರೀದಿ ಲಭ್ಯ
ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ ಡೈಮಂಡ್ ಶೇ.10 ಜನರಲ್ಲಿ ಮಾತ್ರ ಇದೆ. ಡೈಮಂಡ್ಸ್ ಖರೀದಿಯಲ್ಲಿ ಪಾಸಿಟಿವ್ ಅವಕಾಶ ಪಡೆದುಕೊಳ್ಳಬೇಕು. ಗೋಲ್ಡ್ ರೇಟ್‌ನಲ್ಲಿ ಡೈಮಂಡ್ ಖರೀದಿ ಮಾಡುವ ಅವಕಾಶವಿದೆ. ಗೋಲ್ಡ್ ಟೆಸ್ಟಿಂಗ್ ಮೆಸಿನ್ ಪ್ರಥಮವಾಗಿ ಪರಿಚಯ ಮಾಡಿದ್ದೇವೆ. ಡೈಮಂಡ್ ಲ್ಯಾಬ್ ಟೆಸ್ಟಿಂಗ್ ಮಾಡಿಯೇ ಗ್ರಾಹಕರಿಗೆ ಕೊಡುತ್ತಿದ್ದೇವೆ ಎಂದು ಹೇಳಿದರು.

LEAVE A REPLY

Please enter your comment!
Please enter your name here